






ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸುದೇಮುಗೇರು ಮಹಿಳೆ ಹೆರಿಗೆಗೆಂದು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಫೆ. 23 ರಂದು ಬೆಳಗ್ಗಿನ ಜಾವ ಗರ್ಭಿಣಿ ಲೀಲಾವತಿ ಮತ್ತು ಅವರ ಕುಟುಂಬದವರ ಅಭಿಲಾಷೆಯದೊಂದಿಗೆ ಮಂಗಳೂರಿನ ಲೇಡಿಗಷನ್ ಆಸ್ಪತ್ರೆಯಲ್ಲಿ ಹೆರಿಗೆ ಆಗಬೇಕೆಂದು ಹೇಳಿದಾಗ ವೈದ್ಯರ ಸೂಚನೆಯ ಮೇರೆಗೆ ಇಬ್ಬರು ಶುಶ್ರೂಶಕಿಯರ ಜೊತೆಗೆ ಆಸ್ಪತ್ರೆಯ ತುರ್ತು ವಾಹನದಲ್ಲಿ ಮಂಗಳೂರಿಗೆ ಕಳುಹಿಸಲಾಯಿತು.


ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಬಂಟ್ವಾಳ ತಾಲೂಕಿನ ಪರಂಗಿಪೇಟೆ ಸಮೀಪಿಸುತ್ತಿದ್ದಂತೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿದ್ದು ಮಾರ್ಗಮಧ್ಯದಲ್ಲೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಂಬ್ಯುಲೆನ್ಸ್ನಲ್ಲಿ ಮಹಿಳೆಯ ಜೊತೆಗಿದ್ದ ಶುಶ್ರೂಕಿ ಕುಮುದ, ಸೌಮ್ಯ ಮತ್ತು ಚಾಲಕ ದಿನೇಶ್ ಗೌಡ ಅವರ ಸಮಯ ಹಾಗೂ ಕರ್ತವ್ಯಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಅತ್ಯಂತ ಕಡಿಮೆ ಸಮಯದಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆಂದು ಮಹಿಳೆಯ ಜೊತೆಗಿದ್ದವರು ಮಾಹಿತಿ ನೀಡಿದ್ದಾರೆ.









ದೇವರು ಒಳ್ಳೇದು ಮಾಡಲಿ…. ಧನ್ಯವಾದಗಳು 🙏🙏🙏ಆಂಬುಲೆನ್ಸ್ ಡ್ರೈವರ್ ಹಾಗೂ ಜೊತೆಯ್ಲಲಿ ಇದ್ದ ಸಿಸ್ಟರ್ಸ್