ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಬ್ಸ್, ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಚಿಂತನಾ ದಿನಾಚರಣೆ

0

ಉಜಿರೆ:ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಸ್ಥಾಪಕರಾದ ಲಾರ್ಡ್ ಬ್ಯಾಡನ್ ಪಾವೆಲ್ ಹಾಗೂ ಲೇಡಿ ಓಲಾನಾ ಬ್ಯಾಡನ್ ಪಾವೆಲ್ ಅವರ ಜನ್ಮ ದಿನದ ಸ್ಮರಣಾರ್ಥವಾಗಿ ಫೆ.22 ರಂದು ಪ್ರತಿವರ್ಷ ಚಿಂತನ ದಿನವನ್ನಾಗಿ ಆಚರಿಸಲಾಗುತ್ತದೆ.

ಶಾಲೆಯಲ್ಲಿ ಕಬ್ಸ್, ಬುಲ್ ಬುಲ್ ವಿದ್ಯಾರ್ಥಿಗಳಿಂದ ಸುಶಾವ್ಯ ಗೀತೆಗಳು ಹಾಗೂ ನೃತ್ಯವನ್ನು ಪ್ರದರ್ಶನ ಮಾಡಿದರು. ಬುಲ್ ಬುಲ್ ವಿದ್ಯಾರ್ಥಿನಿಯಾದ ಚರಿಷ್ಮ ಈ ದಿನದ ಮಹತ್ವವನ್ನು ತಿಳಿಸಿದರು. ಸ್ಕೌಟ್ ಗೈಡ್ಸ್ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ದೇಶಭಕ್ತಿ ಗೀತೆಯನ್ನು ಹಾಡಿದರು.

ಪ್ರಾಂಶುಪಾಲರಾದ ಫಾ|ವಿಜಯ್ ಲೋಬೊ ಅವರು ಶುಭಹಾರೈಸಿದರು. ಸ್ಕೌಟ್ ವಿದ್ಯಾರ್ಥಿನಿ ಕ್ಲೆರಿಷಾ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿ, ಕುಮಾರಿ ಸ್ಪರ್ಶಾ ಸ್ವಾಗತಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸ್ಕೌಟ್ ಗೈಡ್ಸ್ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

LEAVE A REPLY

Please enter your comment!
Please enter your name here