






ಮಲವಂತಿಗೆ :ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಆಡಳಿತಾಧಿಕಾರಿ ಬೆಳ್ತಂಗಡಿ ವಲಯ ಅರಣ್ಯಧಿಕಾರಿ ಶರ್ಮಿಷ್ಠಾ ಅಧ್ಯಕ್ಷತೆಯಲ್ಲಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಫೆ. 21 ರಂದು ನಡೆಯಿತು.

ಹಿಂದುಳಿದ ವರ್ಗ ಅಲ್ಪಸಂಖ್ಯಾತ ನಿಗಮದ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಜೋಸೆಫ್ ನೋಡೆಲ್ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.


ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ರೋಹಿಣಿ, ಹಾಗೂ ಸದಸ್ಯ ದಿನೇಶ್ ಪವಿತ್ರ ಮತ್ತು ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತೆಯರು,ಕಂದಾಯ ಇಲಾಖೆ, ವೈದ್ಯಧಿಕಾರಿ, ಪಶು ಇಲಾಖೆ,ಮತ್ತು ಮೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಸ್ವಾಗತಿಸಿ, ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆ ಪ್ರಸ್ತಾಪಿಸಿ , ಪಂಚಾಯತ್ ಸಿಬ್ಬಂದಿ ಅಕ್ಷತಾ, ಅನುಪಾಲನ ವರದಿ ಪ್ರಸ್ತಾಪಿಸಿ, ಸಿಬ್ಬಂದಿ ಕಾಂತಿ ಜಮಾ ಖರ್ಚಿನ ಬಗ್ಗೆ ತಿಳಿಸಿದರು.









