






ಲಾಯಿಲ: ರಾಷ್ಟ್ರೀಯ ಹೆದ್ದಾರಿ ಲಾಯಿಲ ಪ್ರಸನ್ನ ಕಾಲೇಜು ಬಳಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಫೆ.21ರಂದು ಬೆಳಿಗ್ಗೆ ನಡೆದಿದೆ.



ಬೈಕ್ ಸವಾರ ಬೆಳಾಲಿನ ಮಾಯಾ ದೇರೆಮಾರು ನಿವಾಸಿ ಬೇಬಿ ಯಾನೆ ಸಂಜೀವ ಎಂದು ತಿಳಿದು ಬಂದಿದ್ದು, ಉಜಿರೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.









