ಧರ್ಮಸ್ಥಳದಿಂದ ಬಳಂಜ ಶಾಲಾ ಕ್ರೀಡಾಂಗಣ ಅಭಿವೃದ್ಧಿಗೆ ನೆರವು, ಮಂಜೂರಾತಿ ಪತ್ರ ಹಸ್ತಾಂತರ

0

ಬಳಂಜ :ಬಳಂಜ ಶಿಕ್ಷಣ ಟ್ರಸ್ಟ್ ಬಳಂಜ ಇದರ ನೇತ್ರತ್ವದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇದಕ್ಕೆ ಟ್ರಸ್ಟ್ ವತಿಯಿಂದ ಶ್ರಿಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಡಾ. ಹೆಗ್ಗಡೆಯವರು ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪರಿಶೀಲಿಸುವಂತೆ ಸೂಚಿಸಿದ್ದು ಇವರ ಸೂಚನೆಯಂತೆ ಯೋಜನೆಯ ಅಧಿಕಾರಿಗಳು ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ್ದರು.

ಫೆ. 20ರಂದು ಮೂರು ಲಕ್ಷ ರೂ ಅನುದಾನದ ಮಂಜೂರಾತಿ ಪತ್ರವನ್ನು ಬಳಂಜ ಶಿಕ್ಷಣ ಟ್ರಸ್ಟ್ ಬಳಂಜ ಮನೋಹರ್ ಬಳಂಜರಿಗೆ ಯೋಜನೆಯ ನಿರ್ದೇಶಕ ದಿನೇಶ್ ಪೂಜಾರಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ನ ಟ್ರಷ್ಟಿ ಪ್ರಮೋದ್ ಜೈನ್, ಯೋಜನಾದಿಕಾರಿ ಅಶೋಕ್ ಬಿ, ಮೇಲ್ವಿಚಾರಕಿ ಪದ್ಮಾವತಿ, ಕಾರ್ಯನಿರತರಾದ ಉಮಾ, ಪೂರ್ಣಿಮ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ , ಶಿಕ್ಷಕಿ ಶೈನಿ ರೀಮಾ ಕ್ರಾಸ್ತಾ ಉಪಸ್ಥಿತರಿದ್ದರು.

ಟ್ರಸ್ಟ್ ನೇತ್ರತ್ವದಲ್ಲಿ ಚಿಣ್ಣರ ಅಂಗಣ , ರಂಗಮಂದಿರ ನಿರ್ಮಾಣ, ಕಂಪ್ಯೂಟರ್ ಕೊಠಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಶಿಲಾನ್ಯಾಸ ನೆರವೇರಿಸಲಾಗಿದೆ. ಟ್ರಸ್ಟ್ ವತಿಯಿಂದ ಈಗಾಗಲೆ ನಾಲ್ಕು ಗೌರವ‌ ಶಿಕ್ಷಕಿಯರಿಗೆ ಗೌರವಧನ, ಒರ್ವ ಸಹಾಯಕಿಗೆ ಗೌರವಧನ ನೀಡಲಾಗುತ್ತಿದೆ. ಉಚಿತ ಎಲ್ ಕೆ ಜಿ ,ಯು ಕೆ ಜಿ ಶಿಕ್ಷಣ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here