







ಸುಲ್ಕೇರಿ:- ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿ (ರಿ.)ಬ್ರಹ್ಮಗಿರಿ ಸುಲ್ಕೇರಿ ಇವರ 3ನೇ ವರ್ಷದ ಗುರು ಪೂಜೆ ಮತ್ತು ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಯಿತು.

ಕುದ್ಯಾಡಿ ಗ್ರಾಮದ ಪ್ರಗತಿಪರ ಕೃಷಿಕರಾದ ಹೊಸಮನೆ ಶ್ರೀ ರಾಮಣ್ಣ ಪೂಜಾರಿಯವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸರ್ವರಿಗೂ ಶುಭ ಆಶೀರ್ವದಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತಾಲೂಕಿನ ಬಂಗೇರ ಬಿ ಗ್ರೇಡ್ ಅಧ್ಯಕ್ಷೆ ಬಿನುತಾ ಬಂಗೇರ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಎಲ್ಲರೂ ಪಾಲಿಸಬೇಕು, ಅವರು ಕೇವಲ ಬಿಲ್ಲವ ಸಮುದಾಯಕ್ಕೆ ಮಾತ್ರ ಗುರುಗಳಗಾದೆ ಇಡೀ ವಿಶ್ವಕ್ಕೆ ಗುರುಗಳಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೆಂದು ತಿಳಿಸಿದರು.


ಬೆಳ್ತಂಗಡಿ ತಾಲೂಕಿನ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ಅವರು ಗುರು ಸಂದೇಶ ನೀಡುವುದರ ಮೂಲಕ ನಾವೆಲ್ಲರೂ ಸಮಾಜದಲ್ಲಿ ಹೇಗಿರಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಮಿತಿ(ರಿ.) ಬ್ರಹ್ಮಗಿರಿ ಸುಲ್ಕೇರಿ ಇದರ ಅಧ್ಯಕ್ಷರಾದ ವಸಂತ ಪೂಜಾರಿ ಪಲ್ಕೆ ಸರ್ವರಿಗೂ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲೂಕಿನ ಶ್ರೀ ಗುರುನಾರಾಯಣ ಸ್ವಾಮಿ ಸಂಘದ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪ್ ಯುವ ಬಿಲ್ಲ ವೇದಿಕೆಯ ಅಧ್ಯಕ್ಷರಾದ ಎಂ ಕೆ ಪ್ರಸಾದ್ ತಾಲೂಕು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾದ ಸುಮತಿ ಪ್ರಮೋದ್ ಸುಲ್ಕೇರಿ ಗ್ರಾಮ ಪಂಚಾಯತಿನ ಸದಸ್ಯರಾದ ನಾರಾಯಣ ಪೂಜಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ).ಸುಲ್ಕೇರಿ ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷರಾದ ಯಶೋಧರ ಪೂಜಾರಿ , ಸುಲ್ಕೇರಿಯ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಸುನಿಲ್ ಪೂಜಾರಿ, ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿ(ರಿ.)ಬ್ರಹ್ಮಗಿರಿ ಸುಲ್ಕೇರಿ ಇದರ ನಿಕಟ ಪೂರ್ವ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ ಉಪಸ್ಥಿರಿದ್ದರು.
ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಸುಧೀರ್ ಎಸ್.ಪಿ ಸ್ವಾಗತಿಸಿದರು ,ವಿಶ್ವನಾಥ್ ಪೂಜಾರಿ ಮತ್ತು ಮಲ್ಲಿಕಾ ರವರು ಕಾರ್ಯಕ್ರಮ ನಿರೂಪಿಸಿದರು, ಸಮಿತಿಯ ಕೋಶಾಧಿಕಾರಿಯಾದ ಪ್ರಭಾಕರ್ ಪೂಜಾರಿ ಧನ್ಯವಾದವಿತ್ತರು.









