






ಮಡಂತ್ಯಾರು :ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ಫೆಬ್ರವರಿ 14ರಂದು ಪೂರ್ವ ಪ್ರಾಥಮಿಕ ವಿಭಾಗದ ಪದವಿ ಪ್ರದಾನ ಕಾರ್ಯಕ್ರಮ ಮತ್ತು ಮಾತಾ-ಪಿತಾಮಹರ(ಹಿರಿಯರ) ದಿನವನ್ನು ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭಿಸಲಾಯಿತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ಸ್ವಾ| ಸ್ಟ್ಯಾನಿ ಗೋವಿಯಸ್ ಅವರು ವಹಿಸಿದ್ದರು.ಪೂರ್ವ ಪ್ರಾರ್ಥಮಿಕ ವಿಭಾಗದ ವಿದ್ಯಾರ್ಥಿಗಳು ನೃತ್ಯ, ಹಾಡು ಹಾಡುವುದರ ಮೂಲಕ ಎಲ್ಲರನ್ನು ಮನರಂಜಿಸಿದರು. ಅಜ್ಜ-ಅಜ್ಜಿಯಂದಿರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನಂತರ ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನವನ್ನು ಮಾಡಲಾಯಿತು.


ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ಚರ್ಚಿನ ಸಹಾಯಕ ಧರ್ಮ ಗುರುಗಳಾದ ಸ್ವಾ| ಲ್ಯಾರಿ ಪಿಂಟೋ, ಸೇಕ್ರೆಡ್ ಹಾರ್ಟ್ ಚರ್ಚಿನ ಉಪಾಧ್ಯಕ್ಷರಾದ ನೆಲ್ಸನ್ ಲಸ್ರಾದೋ , ಶಾಲಾ ಮುಖ್ಯೋಪಾಧ್ಯಯ |ಸ್ವಾ| ದೀಪಕ್ ಲೇಯೋ ಡೇಸ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಹ ಶಿಕ್ಷಕಿಯರು ಶಾಂತಿ ಲೋಬೊ, lಎಲಿಜಬೆತ್, ಸ್ವೀಟ ಡಿಸೋಜ, ಉಪಸ್ತಿತರಿದ್ದರು . ಟ್ರೆಸ್ಸಿ ಲೋಬೊ ಸ್ವಾಗತಿಸಿ, ಅನಿತಾ ಫೆರ್ನಾಂಡಿಸ್ ನಿರೂಪಿಸಿ, ನದಿರ ಫರಾನ್ಹ ಧನ್ಯವಾದವನ್ನು ಸಮರ್ಪಿಸಿದರು.









