ಮಚ್ಚಿನ ಶ್ರೀ ವಿದ್ಯಾಸಾಗರಾಸ್ ಸಿ ಬಿ ಯಸ್ ಇ ಶಾಲೆ ಬಳ್ಳಮಂಜ ಕಲಾಚೈತನ್ಯ ಶಾಲಾ ವಾರ್ಷಿಕೋತ್ಸವ

0

ಮಚ್ಚಿನ ಶ್ರೀ ವಿದ್ಯಾಸಾಗರಾಸ್ ಸಿ ಬಿ ಯಸ್ ಇ ಶಾಲೆ ಬಳ್ಳಮಂಜ ಕಲಾಚೈತನ್ಯ ಶಾಲಾ ವಾರ್ಷಿಕೋತ್ಸವ ನಡೆಯಿತು ಸಮಾರಂಭದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮುಕ್ತೇಶ್ವರದ ಡಾ|ಹರ್ಷ ಸಂಪಿಗೆತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು ಮುಖ್ಯ ಅತಿಥಿಗಳಾಗಿ ರಾ.ರಾ.ಸಂ ನ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಮಾತನಾಡಿ ಶಿಕ್ಷಣದಲ್ಲಿ ಮಕ್ಕಳು ಗುರಿ ಮುಟ್ಟಬೇಕಾದರೆ ಶಿಕ್ಷಕರೊಂದಿಗೆ ಪೋಷಕರ ಪಾತ್ರವು ಮುಖ್ಯ ಎಂದರು ಶಾಲಾ ಸಂಚಲಕರಾದ ವೆಂಕಟರೆಡ್ಡಿ ಶಾಲೆಯ ಅಭಿವೃದ್ಧಿಯ ಬಗ್ಗೆ ವಿವರಿಸಿ ಕಬ್ಬಿಣದಂತ ಮಕ್ಕಳನ್ನು ಚಿನ್ನವಾಗಿ ಪರಿವರ್ತಿಸುವ ಕೆಲಸ ನಮ್ಮ ಈ ಶಾಲೆ ಮಾಡುತ್ತಿದೆ ಎಂದರು.

ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಜೆ. ಜೆ ಸಿ ಐ ಮಡಂತ್ಯಾರ್ ಇದರ ಅಧ್ಯಕ್ಷರಾದ ಸಾಯಿ ಸುಮ ಯಂ, ನಾವಡ ಗ್ರಾಮ ಪಂಚಾಯತ್ ಮಡಂತ್ಯಾರ್ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ಸ್ಥಳೀಯರಾದ ಗೋಪಾಲ ಮೂಲ್ಯ ಇವರು ಉಪಸ್ಥಿತರಿದ್ದರು.

ಶಾಲಾ ಕೋ ಆರ್ಡಿನೇಟರ್ ಸಬಿತಾ ರೆಡ್ಡಿ ಶಾಲಾ ವರದಿ ಮಂಡಿಸಿದರು. ಪೋಷಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರದ್ಧ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲರಾದ ಡಾ|ವರ್ಷ ರೆಡ್ಡಿ ಯಸ್ ವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೋಷಕರು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

✍️ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here