






ಬೆಳ್ತಂಗಡಿ: ಬಳಂಜ ಉನ್ನತೀಕರಿಸಿದ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ಫೆ.09ರಂದು ಟಿಪ್ಪರ್ ಲಾರಿ ಹಾಗೂ ಪಿಕಪ್ ಜೀಪಿನಲ್ಲಿ ಶಾಲಾ ಮಕ್ಕಳನ್ನು ಹೊರ ಸಂಚಾರಕ್ಕೆ ಕರೆದುಕೊಂಡು ಹೋಗಿರುವ ಟಿಪ್ಪರ್ ಹಾಗೂ ಪಿಕಪ್ ವಾಹನ ಮಾಲಕ ಪ್ರವೀಣ್ ಪೂಜಾರಿ ಲಾಂತ್ಯಾರು ರವರ ವಿರುದ್ಧ ಫೆ.12ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಸುದ್ದಿ ಬಿಡುಗಡೆಗೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಪೂಜಾರಿಯವರು, ಶಾಲೆಯೇ ದೇಗುಲವೆಂದು ನಂಬಿ ವಿಶ್ವಾಸದಿಂದ ಉಚಿತ ಸೇವೆಯ ರೂಪದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕಾಗಿ ಶಾಲೆಯಿಂದ ಎರಡು ಕಿ.ಮೀ ದೂರದ ನಾಲ್ಕೂರು ಗ್ರಾಮದ ರಾಮನಗರ ಅನಿಲ್ ಭಟ್ ರವರ ಬಳಂಜ ಪಾರ್ಮ್ ಗೆ ನನ್ನ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದು ನಿಜ. ಅದು ನನ್ನ ತಪ್ಪು ತಿಳುವಳಿಕೆಯಿಂದ ನನಗೆ ಗೊತ್ತಿಲ್ಲದೆ ನಡೆದ ಘಟನೆ. ಆದರೂ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಬರುವವರೆಗೆ ನಾನು ಮತ್ತು ಶಾಲಾ ಶಿಕ್ಷಕ ವೃಂದದವರ ಜೊತೆಗೆ ಮಕ್ಕಳ ಬಗ್ಗೆ ಅತ್ಯಂತ ಜಾಗ್ರತೆ ಮತ್ತು ಕಾಳಜಿಯನ್ನು ವಹಿಸಿಕೊಂಡಿರುತ್ತೇವೆ. ನಾನು ಬಳಂಜ ಮತ್ತು ಅಟ್ಲಾಜೆ ಶಾಲೆಯ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಲ್ಲಿ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ತೊಡಗಿಸಿಕೊಂಡಿದ್ದು ವರ್ಷಕ್ಕೆ 25 ಸಾವಿರಕ್ಕಿಂತಲೂ ಹೆಚ್ಚು ಮೊತ್ತದಲ್ಲಿ ದೇಣಿಗೆ ಮತ್ತು ವಸ್ತು ರೂಪದಲ್ಲಿ ಸಹಕರಿಸಿರುತ್ತೇನೆ.



ಈ ವಿಷಯದಲ್ಲೂ ಹಾಗೆಯೇ ನಾನು ರೀತಿಯ ಬಾಡಿಗೆ ಪಡೆಯುವ ಉದ್ದೇಶ ಇಟ್ಟುಕೊಂಡು ನನ್ನ ಪಿಕಪ್ ಮತ್ತು ಟಿಪ್ಪರ್ ಅನ್ನು ಶಾಲಾ ಮಕ್ಕಳ ಅಧ್ಯಯನ ಪ್ರವಾಸಕ್ಕೆ ನೀಡಿದ್ದಲ್ಲ. ಬಳಂಜ ಪಾರ್ಮ್ ಕೇವಲ ಶಾಲೆಯಿಂದ ಎರಡು ಕಿಲೋಮೀಟರ್ ದೂರ ಇರುವುದರಿಂದ ಶಾಲಾ ಮಕ್ಕಳಿಗೆ ಪ್ರಯೋಜನ ಆಗಲಿ ಎಂಬ ಒಂದೇ ಉದ್ದೇಶದಿಂದ ಉಚಿತವಾಗಿ ನೀಡಿರುತ್ತೇನೆ. ಶಾಲೆಯ ಏಳಿಗೆಯನ್ನು ಬಯಸದ ವಿಘ್ನ ಸಂತೋಷಿಗಳು ಉದ್ದೇಶಪೂರ್ವಕವಾಗಿ ಶಿಕ್ಷಣ ಇಲಾಖೆಗೆ ದೂರು ನೀಡಿ ನನ್ನ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಟಿಪ್ಪರ್ ಮತ್ತು ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿರುವುದು ವಿಪರ್ಯಾಸವಾಗಿದೆ ಎಂದು ಹೇಳಿಕೊಂಡಿದ್ದಾರೆ










U are done selfless educational services to childrens (gods ).Education dept need to understand your keen of interest. Support ur good activities.
ಲೋಕ ಹಿತ ಲೋಕಕ್ಕೆ ಬೇಕಿಲ್ಲ. ಎಲ್ಲೆಲ್ಲೂ ಅನ್ಯಾಯ ತಾಂಡವವಾಡುತ್ತಿದೆ. ಪೋಷಕರಿಗೆ ಮಕ್ಕಳ ಹೇಗೆ ರೂಪಿಸಿಕೊಳ್ಳಬೇಕು ಎಂಬ ಅರಿವಿದ್ದಿದ್ದರೆ. ಅವರಿಗೆ ಟಿಪ್ಪರ್ ನಲ್ಲೂ ದಾರಿ ಸಾಗುತ್ತದೆ. ಮಕ್ಕಳ ಏಳಿಗೆ ಸಾಧ್ಯ ಇರುವ ಸೌಲಭ್ಯಗಳ ಬಳಸಿ ಮಕ್ಕಳ ಬಹುಮುಖ ವ್ಯಕ್ತಿತ್ವ ವಿಕಸನಕ್ಕೆ ಬೆಂಬಲಿಸೋಣ ಎಂದು ನಿಮ್ಮ ವಿರುದ್ಧ ಅಪಪ್ರಚಾರ ಮಾಡಿದವರ ಮತ್ತು ಕ್ರಮ ಕೈಗೊಂಡವರ ವಿರುದ್ಧ ಹೋರಾಡುತ್ತಿದ್ದರು. ಇದು ಪೋಲೀಸರ ತಪ್ಪಲ್ಲ ಅವರು ನಿನ್ನಂತೆಯೇ ನೊಂದವರೇ ಆದಾಗ್ಯೂ ಈ ಕೇಸು ನಿಮ್ಮ ವಿರುದ್ಧ ನಿಲ್ಲುವುದಿಲ್ಲ. ನಿಮ್ಮ ಉತ್ಸಾಹ ಕಡಿಮೆ ಮಾಡಿಕೊಳ್ಳಬೇಡಿ ಆದರೆ ಹಲ್ಕಾ ನನ್ಮಕ್ಳಿಗೆ ಸಹಕರಿಸಬೇಡಿ ಯಾರು ಕೇಳುತ್ತಾರೋ ಅವರಿಗೆ ಸಹಕರಿಸಿ ಶುಭವಾಗಲಿ
Nivu heluva maathu Sari ide. Anna igina kaladalli sahaya maduvudu tappe, nijavagiyu iga arthavagide.
ಹೆದರಬೇಡ ಒಳ್ಳೇದು ಮಾಡೋರಿಗೆ ಹೀಗೆ
VERY SORRY–
Let God give good sense to all
VERY SORRY-
Let God give good sense to all
Very sad. Hope they will return the vehicle to you as well as remove the case against you.
ಯಾವುದು ಸರಿ ಯಾವುದು ತಪ್ಪು ಎಂದು ಅರ್ಥವೇ ಆಗೋದಿಲ್ಲ
ಕಾನೂನ್ ವ್ಯವಸ್ಥೆಯ ಅರಿವು ಯಾವ ನಾಗರೀಕನಿಗೂ ಇಲ್ಲಾ,,,, ಪೊಲೀಸ್ ಇಲಾಖೆ ಈವರೆಗೆ ಈ ವಿಷಯದಲ್ಲಿ ಎಲ್ಲೂ ಅರಿವು ಮೂಡಿಸಿದ್ದು ಇಲ್ಲಾ
ಒಟ್ಟಾರೆ ಹೇಳುವುದಾದರೆ ಬದುಕುವುದೇ ಕಷ್ಟ,,, ಒಳ್ಳೆಯತನಕ್ಕೆ
ಬೆಲೆ ಇಲ್ಲಾ 😭 ಪ್ರತೀ ಹೆಜ್ಜೆಯಲ್ಲೂ ಮನುಷ್ಯನಿಗೆ ವೈರಿ ಇದ್ದಾನೆ
ಏನು ಗೊತ್ತೆ.. ಮೊದಲು ತೆರೆದ ವಾಹನದಲ್ಲಿ ಹೊರಸಂಚಾರ ಹೊರಟ ಮಕ್ಕಳ ಫೋಟೊ ನೋಡಿದಾಕ್ಷಣ.. ಗ್ರಾಮೀಣ ಮಕ್ಕಳದ್ದು ಎಂಥ ಖುಷಿ! ಈ ಆನಂದವು ನಗರದ ಮಕ್ಕಳಿಗೆ ಸಿಗೊಲ್ವಲ್ಲ ಅನಿಸಿದ್ದು ನಿಜ. ನಮ್ಮ ಬಾಲ್ಯದಲ್ಲಿ ಸಹ ನಮಗೆ ಆಯ್ಕೆ ಕೊಟ್ಟಿದ್ದರೆ, ಟ್ರಾಕ್ಟರು ಲಾರಿ ಮೇಲೆ ಹತ್ತುವ ಅವಕಾಶವನ್ನೇ ಆರಿಸುತ್ತಿದ್ದೆವು, ಇದು ಖಂಡಿತ.
ಇಂದಿನ ವಸ್ತುಸ್ಥಿತಿ ಹೀಗಿದೆ. ಏನೇ ಇರಲಿ, ಈ ಸುದ್ದಿಯ ಮೂಲಕ ಮಕ್ಕಳ ಸರ್ವತೋಮುಖ ಶಿಕ್ಷಣದ ಬಗೆಗಿನ ತಮ್ಮ ಕಳಕಳಿಯ ಅರಿವು ಎಲ್ಲರಿಗೂ ಆಗಿದೆ. ತಮಗೆ ಒಳಿತಾಗಲಿ ಸರ್.
Neevu upakari jana adaru kanoonunina bagge tiliya bekittu athava shaleya principal nimage tilisabekittu. Makkalannu tour ge kondu hoguvaga commercial vehicles use madabaradu licensed Bus athava car use maadabeku idu makkala safety gagi,nimma upakara yaru prashnisuvadilla .
Olledagali
ಟಿಪ್ಪರ್ ಇರುವುದು ಕಲ್ಲು, ಮಣ್ಣು ಮತ್ತಿತರ ವಸ್ತು ಅಥವಾ ಸಾಮಗ್ರಿಗಳ ಸಾಗಣಿಕೆಗೆ ಹೊರತು ಮಕ್ಕಳ ಸಾಗಾಟಕ್ಕೆ ಅಲ್ಲಾ ಅನ್ನುವ ಕನಿಷ್ಠ ಪರಿಜ್ಞಾನ ಇರಬೇಕು ಸರ್.
ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡುವ ಇಂತಹ ಘಟನೆಗಳು ಸಾಮಾಜಿಕ ಚಟುವಟಿಕೆ ಅಥವಾ ಸಮಾಜ ಸೇವೆ ಅಂತಾ ಅನ್ನಿಸಿಕೊಳ್ಳೋದಿಲ್ಲ. ಇದು ಖಂಡಿತಾ ತಪ್ಪು. ಓರ್ವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯನಾಗಿ, ಮಕ್ಕಳ ಹಕ್ಕುಗಳ ಹೋರಾಟಗಾರನಾಗಿ ನಾನು ಇಂತಹ ಘಟನೆಗಳನ್ನ ಖಂಡಿತ ಒಪ್ಪುವುದಿಲ್ಲ.
So sad, praveen, you loved that service to school and students very much , but nowadays society don’t like it, there is 10% population their thinking is very bad and changes colour as per circumstances for benifits.
Let God give you strength to overcome.
This how innocent people are facing the problems all the best dear you good will take care of you. Don’t worry God is there with you
ಏಕಾಲದಲ್ಲಿ ಒಳ್ಳೇದು ಮಾಡಬಾರದು ಬ್ರದರ್
ಕೇಳಿ ತುಂಬ ಬೇಸರವಾಯ್ತು ಸಾರ್, ದೇವರಲ್ಲಿ ನಂಬಿಕೆಯಿಡಿ ಸರ್! ನೆನಪಿನಲ್ನಿಡಿ ನಿಮ್ಮ ಉದಾರದ ಕೆಲಸ ಹಾಗೂ ಪ್ರತಿಫಲ ಬಯಸದ ನಿಮ್ಮ ಉಪಕಾರಕ್ಕೆ ಮುಂದೆ ದೇವರು ಕೊಡುವ ಆಶೀರ್ವಾದ ಅಗಮ್ಯ…thank you lord
Very sad.
People who complained certainly didn’t see or didn’t enquire before floating this news in the media.
ತುಂಬ ಸಂತೋಷ da ವಿಷಯ ಸಿಬಂದಿ ವರ್ಗದವರು ಸರ್ಕಾರಕ್ಕೆ ಒಂದು ಮನವಿ ಕೊಡಬೇಕಿತು ಸರ್ಕಾರ ವ್ಯವಸ್ಥೆ ಮಾಡದಿದ್ರೆ ನೀವೂ ತಗೊಂಡು ನಿರ್ಧಾರ ಸರಿಯಾಗಿತ್ತು
Yarigu olledu madoke hogbardu adru olle manasu erorige swarthi agoke agalla. Devriddare kapadoke.
No tension God is Great Godbless u Good work Do Good Work always God bless you 💖