






ನಿಡ್ಲೆ:ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಶಾಂತಾ ಶೆಟ್ಟಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಫೆ. 14ರಂದು ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತ ಶೆಟ್ಟಿ ಅವರು ತನ್ನ 32 ವರ್ಷಗಳ ಸೇವಾವಧಿಯ ಅನುಭವಗಳನ್ನು ಹಂಚಿಕೊಂಡರು.



ಈ ಸಂದರ್ಭದಲ್ಲಿ ಅವರ ಒಡನಾಡಿ ಸಹೋದ್ಯೋಗಿಗಳು, ಮಿತ್ರರು, ಬಂಧು ಬಳಗದವರು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಕಾರ್ಯಾಧ್ಯಕ್ಷರಾದ ಲಕ್ಷ್ಮಣಗೌಡ ವಹಿಸಿದ್ದರು. ಹಳೆ ವಿದ್ಯಾರ್ಥಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ನಿವೃತ್ತ ಮುಖ್ಯ ಶಿಕ್ಷಕ ರಾಜಗುರು ಹೆಬ್ಬಾರ್ ವೇಣೂರು ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ವೆಂಕಟೇಶ್ ತುಳುಪುಳೆ, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಪ್ರಭಾರವನ್ನು ಸ್ವೀಕರಿಸಿ ಶರತ್ ಕುಮಾರ್ ರವರು ನಿವೃತ್ತರಿಗೆ ಶುಭ ಹಾರೈಸಿ ಮುಂದಿನ ಜವಾಬ್ದಾರಿ ನಿರ್ವಹಣೆಗೆ ಎಲ್ಲರ ಸಹಕಾರ ಕೋರಿದರು.. ಗಿತೇಶ್ ಸ್ವಾಗತಿಸಿ ಶೋಲಿ ವಿ ಜೆ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಸಿ,ಅಡುಗೆ ಸಿಬ್ಬಂದಿಯವರು ಮತ್ತು ಪೋಷಕರು ಸಹಕರಿಸಿದರು.











