ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮಗುವಿನ ನೆರವಿಗೆ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಪೆನ್ ಮಾರಾಟ-ಯುವಕರಿಂದ ವಿನೂತನ ಕಾರ್ಯ

0

ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ 584ನೇ ಸೇವಾ ಯೋಜನೆಗೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ ಸಿಕ್ಕಿದೆ. ಬೆಳ್ತ೦ಗಡಿ ತಾಲೂಕು ಗರ್ಡಾಡಿ ನಿವಾಸಿಯಾದ ಉಮಾವತಿಯವರ 4ವರ್ಷದ ಮಗಳಾದ ಪ್ರಜ್ಞಾ ಕೆ. ಎoಡೋಸಲ್ಫಾನಿ೦ದ ಬಳಲುತ್ತಿರುವ ಮಗುವಾಗಿದ್ದು ಈ ಮಗುವಿನ ಪ್ರತಿ ತಿಂಗಳ ಆರೋಗ್ಯದ ಚಿಕಿತ್ಸೆಯ ಸಹಾಯಕ್ಕಾಗಿ ಬಸ್ ಸ್ಟ್ಯಾಂಡ್ ನಲ್ಲಿ ಪೆನ್ನು ಮಾರಾಟ ಮಾಡುವ ಅಭಿಯಾನಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್ ರವರು ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಅರ್ಜುನ್ ರಾಜಕೇಸರಿ ಸೇವಾ ಟ್ರಸ್ಟ್ ನ ಸೇವಾ ಕಾರ್ಯ ಅನುಕರಣೀಯ ಎಂದು ಶುಭ ಹಾರೈಸಿದರು. ಈ ವೇಳೆ ವಿಜಯವಾಣಿ ಪತ್ರಿಕಾ ವರದಿಗಾರ ಮನೋಹರ್ ಬಳಂಜ, ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ, ಸಾಮಾಜಿಕ ಕಾರ್ಯಕರ್ತ ಶೇಖರ್ ಲಾಯಿಲ ಜೊತೆಗಿದ್ದರು. ರಾಜಕೇಸರಿ ಸೇವಾ ಟ್ರಸ್ಟ್ ನ ಅಧ್ಯಕ್ಷ ದೀಪಕ್ ಜಿ ಮತ್ತು ಸೇವಾ ಟ್ರಸ್ಟ್ ನ ಯುವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here