ಕೊರಂಜ ಶಾಲಾಯಲ್ಲಿ ಮೆಟ್ರಿಕ್ ಮೇಳ; ವಿದ್ಯಾರ್ಥಿಗಳ ಪ್ರತಿಭೆಗೆ ಭರ್ಜರಿ ಮೆಚ್ಚುಗೆ

0

ಗೇರುಕಟ್ಟೆ :ಕೊರಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮೆಟ್ರಿಕ್ ಮೇಳವು ವಿದ್ಯಾರ್ಥಿಗಳ ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಅರಿವನ್ನು ಪ್ರದರ್ಶಿಸುವ ಯಶಸ್ವಿ ವೇದಿಕೆಯಾಗಿತು.

ಮೇಳದ ಉದ್ಘಾಟನೆಯನ್ನು, ದೀಪ ಪ್ರಜ್ವಲನದೊಂದಿಗೆ ವಿಶಿಷ್ಟವಾಗಿ ಕಳಪೆಯ ಮೇಲೆ ಸ್ಥಾಪಿಸಿದ ತೆಂಗಿನ ಸಿಂಗಾರ ಬಿಡಿಸುವ ಮೂಲಕ ಶಾಲೆಯ ಹಿರಿಯ ವಿದ್ಯಾರ್ಥಿ ಕಡಬ ಆಡಳಿತಾಧಿಕಾರಿ ದಿನೇಶ್ , ಕೆಳಗಿನ ಬೆಟ್ಟು ರಂಜನ್. ಕೆಳಗಿನ ಬೆಟ್ಟು ನೆರವೇರಿಸಿದರು. ಗೇರುಕಟ್ಟೆ ಸ್ನೇಹ ಸಂಗಮ ಅಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ವಿದ್ಯಾರ್ಥಿಗಳ ವ್ಯವಹಾರ ಸಂವಹನ, ಚಾತುರ್ಯವನ್ನು ಮೆಚ್ಚುಗೆ ವ್ಯಕ್ತ ಪಡಿಡಿಸಿದರು.


ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವ್ಯವಹರಿಸಿದ ರೀತಿಗೆ ಪೋಷಕರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಇಂತಹ ಮೇಳಗಳು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬೇಕರಿ ತಿಂಡಿಗಳು, ಸೊಪ್ಪು ತರಕಾರಿ, ಕಬ್ಬು, ಜ್ಯೂಸ್ ಗಳು, ಮಾವು, ಹಣ್ಣುಹಂಪಲುಗಳು, ಚಾಟ್ ಐಟಮ್ ಗಳು, ಅದೃಷ್ಟದಾಟಗಳು, ಹೂವಿನ ಗಿಡಗಳು, ಇತ್ಯಾದಿ ವಸ್ತುಗಳ ಮಾರಾಟ ದಿಂದ ವಿದ್ಯಾರ್ಥಿಗಳು ಲಾಭ ಪಡೆದು ಸಂತಸದಿಂದ ಸಂಭ್ರಮಿಸಿದರು.


ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಬೆಳೆದ ಎಳನೀರಿನ ಏಲಂ ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷ ಹರೀಶ್ ಕುಮಾರ್ ಬಿ. ಯಶಸ್ವಿಯಾಗಿ ನಡೆಸಿಕೊಟ್ಟರು.
ಸಂಗ್ರಹವಾದ ಮೊತ್ತವನ್ನು ಶಾಲಾಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು. ಸಹಶಿಕ್ಷಕಿ ಅನುರಾಧಾ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ಶಾಂತಾ ಧನ್ಯವಾದವನ್ನಿತ್ತರು. ಸಹಶಿಕ್ಷಕಿ ಶ್ರೀವಿದ್ಯಾ ಕಾರ್ಯಕ್ರಮ ಸಂಯೋಜಿಸಿದರು. ಶಾಲಾ ಎಸ್. ಡಿ. ಎಂ. ಸಿ ಸದಸ್ಯರು, ಶಿಕ್ಷಕ ವರ್ಗ, ಅಡಿಗೆ ಸಿಬ್ಬಂದಿ ಮೇಳದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here