ಮಲೆಬೆಟ್ಟು ವನದುರ್ಗಾ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ರಂಗಪೂಜೆ ಹಾಗೂ ಕಮ್ಮಟ ಭಜನೋತ್ಸವ

0

ಕೊಯ್ಯೂರು: ಮಲೆಬೆಟ್ಟು ವನದುರ್ಗಾ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದೆ.ಫೆ.8 ರಂದು ಶ್ರೀ ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ ಹಾಗೂ ನಾಗದೇವರ ಸನ್ನಿಧೀಯಲ್ಲಿ ಆಶ್ಲೇಷ ಬಲಿ, ಪ್ರಸನ್ನ ಪೂಜೆ ನಡೆಯಿತು.

ರಾತ್ರಿ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ಯಕ್ಷಗಾನ ಕಲಾಸಂಘ ಅದೂರು ಪೆರಾಲ್ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ- ಲಂಕಾದಹನ ನಡೆಯಿತು. ನಂತರ ಶ್ರೀ ರಂಗಪೂಜೆ, ಶ್ರೀ ದೇವಿ ಉತ್ಸವ, ನಿತ್ಯ ಬಲಿ ನಡೆಯಿತು.ಫೆ.9 ರಂದು ಶ್ರೀ ದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ ನಡೆಯಿತು.ರಾತ್ರಿ ಶ್ರೀ ರಾಮ ಭಜನಾ ಮಂಡಳಿ ಮಲೆಬೆಟ್ಟು ಇವರ ನೇತೃತ್ವದಲ್ಲಿ ಭಜನಾ ಮಂಡಳಿಗಳಿಂದ ಕಮ್ಮಟ ಭಜನೋತ್ಸವ. ರಾತ್ರಿ 8.30 ರಿಂದ ರಂಗಪೂಜೆ, ಶ್ರೀ ದೇವಿ ಉತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಿತು.

LEAVE A REPLY

Please enter your comment!
Please enter your name here