







ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರ ಭೇಟಿ- ಕುಂದು ಕೊರತೆಗಳ ಬಗ್ಗೆ ವೇಳೆ ನ್ಯಾಯಾಧೀಶರಿಗೆ ವಿವರಣೆ-ನ್ಯಾಯಾಧೀಶರಿಂದ ಸ್ಪಂದನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಹೈಕೋರ್ಟ್ ನ್ಯಾಯಾಧೀಶರಾದ ನರೇಂದ್ರಪ್ರಸಾದ್ ರನ್ನು ಹೈಕೋರ್ಟ್ ನ್ಯಾಯವಾದಿ ಪಿ ಪಿ ಹೆಗ್ಡೆಯವರ ಜೊತೆ ದ.ಕ.ಜಿಲ್ಲಾ ವಕೀಲರ ಸಂಘ,ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಮೂಡಬಿದ್ರೆ ವಕೀಲರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿದರು. ಫೆ.9 ರಂದು ಭೇಟಿಯಾದ ವೇಳೆ,
ದಕ್ಷಿಣ ಕನ್ನಡ ಜಿಲ್ಲಾ ವಕೀಲರ, ವಕೀಲರ ಭವನ ಮತ್ತು ನ್ಯಾಯಾಲಯಗಳ ಕುಂದುಕೊರತೆಗಳ ಬಗ್ಗೆ ಮಾತುಕತೆ ನಡೆಸಲಾಯಿತು. ಈ ಬಗ್ಗೆ ಆಡಳಿತಾತ್ಮಕ ನ್ಯಾಯಾಧೀಶರು ಸಕಾರಾತ್ಮಕವಾಗಿ ಸ್ಪಂದಿಸಿದರು.



ಈ ಬಗ್ಗೆ ಆಡಳಿತಾತ್ಮಕ ನ್ಯಾಯಾಧೀಶರು ಸಕಾರಾತ್ಮಕವಾಗಿ ಸ್ಪಂದಿಸಿದ, ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸಂಘಟಿತವಾಗಿ ಚರ್ಚಿಸಿದ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು.ಭೇಟಿ ವೇಳೆ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಿಚಾರ್ಡ್ ಕೊಸ್ತಾ, ಜೊತೆ ಕಾರ್ಯದರ್ಶಿ ನವೀನ್ ಬಿ ಕೆ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹೆಚ್ ವಿ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೆಚ್, ಉಪಾಧ್ಯಕ್ಷ ಸುಜಿತ್ ಕುಮಾರ್, ನ್ಯಾಯವಾದಿಗಳಾದ ಗಿರೀಶ್ ಶೆಟ್ಟಿ, ಪ್ರವೀಣ್ ಕುಮಾರ್ ಆದ್ಯಪಾಡಿ, ಚಂದ್ರಹಾಸ ಕೊಟ್ಟಾರಿ, ಬಂಟ್ವಾಳ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ ನರೇಂದ್ರನಾಥ್ ಭಂಡಾರಿ ಮತ್ತು ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷರಾದ ಹರೀಶ್ ಭಾಗಿಯಾಗಿದ್ದರು.









