






ಗುರುವಾಯನಕೆರೆ: ವಿದ್ವತ್ ಕಾಲೇಜಿನಲ್ಲಿ ವಾಕ್ ಇನ್ ಟು ವಿದ್ವತ್ ನಾಮಫಲಕ ಅನಾವರಣ ಹಾಗೂ ಲ್ಯಾಬ್ ಉಧ್ಘಾಟನೆಯು ಫೆ.8ರಂದು ವಿದ್ವತ್ ಕಾಲೇಜನಲ್ಲಿ ನಡೆಯಿತು. ಪದ್ಮಶ್ರೀ ಪುರಸ್ಕ್ರತ ಹರೇಕಳ ಹಾಜಬ್ಬ ವಾಕ್ ಇನ್ ಟು ವಿದ್ವತ್ ನಾಮಫಲಕ ಅನಾವರಣಗೊಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಉಧ್ಘಾಟನೆಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ನೆರವೇರಿಸಿ ನಾವು ಮಾಡುವ ಕಾಯಕದಲ್ಲಿ ಇಚ್ಚಾ ಶಕ್ತಿ ಮತ್ತು ಬಧ್ದತೆಯಿದ್ದಾಗ ಸಂಸ್ಥೆಯು ಮೇಲಂಕ್ತಿಯಲ್ಲಿ ಸಾಗುತ್ತದೆ. ವಿದ್ವತ್ ಕಾಲೇಜು ಶ್ರೇಷ್ಟ ಸಂಸ್ಥೆಯಾಗಿ ಬೆಳೆಯುತ್ತದೆ ಎಂದರು.ಭೌತಶಾಸ್ತ್ರ ವಿಭಾಗದ ಪ್ರಯೋಗಾಲಯದ ಉಧ್ಘಾಟನೆಯನ್ನು ಬೆಳ್ತಂಗಡಿ ತಹಶಿಲ್ದಾರ್ ಪ್ರಥ್ವಿ ಸಾನಿಕಮ್ ಉಧ್ಘಾಟಿಸಿದರು. ರಾಸಯಾನ ಶಾಸ್ತ್ರ ವಿಭಾಗದ ಪ್ರಯೋಗಲಯವನ್ನು ಫಾ. ಜೊಸೇಫ್ ವಲಿಯಪರಂಬಿಲ್ ನೆರವೇರಿಸಿದರು. ಜೀವ ವಿಭಾಗದ ಪ್ರಯೋಗಾಲಯದ ಉದ್ಟಾಟನೆಯನ್ನು ಕುವೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ ನೆರವೇರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವತ್ ಎಜುಕೇಶನ್ ಪೌಂಡೇಶನ್ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ವಹಿಸಿದರು.ವೇದಿಕೆಯಲ್ಲಿ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಜ್ವಲ್ ರೈ ಕೋಶಾಧಿಕಾರಿ ಕಾಶಿನಾಥ ಭಟ್, ಟ್ರಸ್ಟಿಗಳಾದ ಸುಚಿತ್ರಾ ಶೆಟ್ಟಿ, ರೆಷ್ಮಾಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆ ಹರೇಕಳ ಹಾಜಬ್ಬ ಮತ್ತು ಮಂಗಳೂರು ಪ್ರೆಸ್ ಕ್ಲಬ್ ಅದ್ಯಕ್ಷ ಹರೀಶ್ ರೈ ಅವರನ್ನು ವಿದ್ವತ್ ವಿದ್ವಾನ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರತಾಪ್ ಬಾಬು ಡಿ.ಎಂ. ಪ್ರಸ್ತಾವಣೆಗೈದರು.ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಧಿಕಾರಿ ಚೈತೇಶ್ ಇಳಂತಿಲ ಸಂದೇಶ ವಾಚಿಸಿದರು. ಪ್ರಾಂಶುಪಾಲ ಹರೀಶ್ ಕೆ ಆರ್ ವಂದಿಸಿದರು. ಆಡಳಿತಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ಉಪನ್ಯಾಸಕ ವೃಂದದವರು ಸಹಕರಿಸಿದರು









