ಪೆರಿಯೊಟ್ಟು ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

0

ಬಾರ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ ) ಗುರುವಾಯನಕೆರೆ ಯೋಜನಾ ಕಚೇರಿಯ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಬಾರ್ಯ ಸ್ಥಳೀಯ ಸಂಘ ಸಂಸ್ಥೆ ಗಳ ಸಹಕಾರ ದೊಂದಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ, ವಿಶ್ವ ಹಿಂದೂ ಪರಿಷತ್, ಶ್ರೀ ರಾಮ ಆಂಜನೇಯ ಭಜನಾ ಮಂಡಳಿ ಬಾರ್ಯ, ಪೆರಿಯೋಟ್ಟು ಶಾಲೆ, ಮಾತೃ ಶಕ್ತಿ ದುರ್ಗವಾಹಿನಿ ಇವುಗಳ ಸಹಕಾರದೊಂದಿಗೆ ಬ್ರಹತ್ ಆರೋಗ್ಯ ತಪಾಸಣಾ ಶಿಬಿರ ಫೆ. 8 ರಂದು ನಡೆಯಿತು.

ಉದ್ಘಾಟನೆಯನ್ನು ಬಾರ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರು ನೆರವೇರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಈ ಶಿಬಿರವು ಉತ್ತಮ ಪ್ರಯೋಜನಕಾರಿಯಾಗಿವೆ. ಹಣ ಆಸ್ತಿ ಎಷ್ಟೋ ಸಂಪಾದನೆ ಮಾಡಬಹುದು ಆದರೆ ಆರೋಗ್ಯವೇ ಸರಿ ಇಲ್ಲದ ಮೇಲೆ ಯಾವ ಸಂಪಾದನೆ ಮಾಡಿದರು ಪ್ರಯೋಜನ ಇಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಅನ್ನುವ ಮಾತಿನೊಂದಿಗೆ ಶುಭ ಹಾರೈಸಿದರು.

ಒಕ್ಕೂಟದ ಅಧ್ಯಕ್ಷರು ಮೋಹನ್ ಗೌಡ, ಯೋಜನಾಧಿಕಾರಿ ಅಶೋಕ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಯಂತ್, ಎಸ್ ಡಿ ಎಂ ಸಿ ಅಧ್ಯಕ್ಷ ಜನಾರ್ಧನ್, ಶಾಲಾ ಮುಖ್ಯೋಪಾಧ್ಯಾಯ ಹೇಮಾವತಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗುಣಕರ್, ಎಸ್ ಡಿ ಎಂ ಹಾಸ್ಪಿಟಲ್ ನ ಪಿ.ಸಿ.ಸಿ. ಹೇಮಾವತಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here