ಮೇಲಂತಬೆಟ್ಟು ವಿಶೇಷಚೇತನರ ಸಮನ್ವಯ ಗ್ರಾಮ ಸಭೆ: ಆಹಾರದ ಕಿಟ್ ವಿತರಣೆ: ಮಾಹಿತಿ ಕಾರ್ಯಾಗಾರ; ಸನ್ಮಾನ

0

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ವಿಕಲಚೇತನರ ಸಮನ್ವಯ ಗ್ರಾಮ ಸಭೆಯು ಸರಕಾರಿ ಸುತ್ತೋಲೆಯ ಪ್ರಕಾರ ಫೆ. 3 ರಂದು ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಸವಿತಾ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ತಾಲೂಕು ವಿಕಲಚೇತನರ ಸಮನ್ವಯಾಧಿಕಾರಿ ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ ಭಾಗಿಯಾಗಿ ಇಲಾಖಾ ಸೌಲಭ್ಯಗಳ ಮಾಹಿತಿ ನೀಡಿದರು. ಇಂದಬೆಟ್ಟು ಗ್ರಾ.ಪಂ ವಿಆರ್‌ಡಬ್ಲ್ಯು ಎಂ.ಜೆ ಜೋಸೆಫ್ ವಿಕಲಚೇತನರಿಗೆ ಸ್ಪೂರ್ತಿಯ ಮಾತನ್ನಾಡಿದರು.

ಗ್ರಾ.ಪಂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸದಸ್ಯ ಸಂತೋಷ್ ಕುಮಾರ್, ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ‌ ಚಂದ್ರಕಲಾ ರವರು ಶುಭ ಹಾರೈಸಿದರು. ಸದಸ್ಯರಾದ ಚಂದ್ರಶೇಖರ, ಚಂದ್ರರಾಜ್ ಎಂ, ಪ್ರಭಾಕರ ಆಚಾರ್ಯ ಮತ್ತು ಸುಮಲತಾ ಉಪಸ್ಥಿತರಿದ್ದರು.
ಸಭೆಯಲ್ಲಿ ಸೌಭಾಗ್ಯ ವಿಕಲಚೇತನರ ಪತ್ತಿನ‌ ಸಹಕಾರಿ ಸಂಘದ ನಿರ್ದೇಶಕ ಹಾಗೂ ಸಲಹಾ ಸಮಿತಿ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ಬ್ಯಾಂಕಿಂಗ್ ಮಾಹಿತಿ ನೀಡಿದರು.

ಪ್ರಭಾರ ಪಿಡಿಒ ನಿರ್ಮಲ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸೌಭಾಗ್ಯ ಸೊಸೈಟಿ ವ್ಯವಸ್ಥಾಪಕ ಸಹನ್ ಕುಮಾರ್ ಭಾಗಿಯಾಗಿದ್ದರು.
ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಗಣೇಶ್ ವರದಿ ಮಂಡಿಸಿದರು. ಪಂಚಾಯತ್ ಆಡಳಿತ ವಿಭಾಗದ ಅಧಿಕಾರ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಉದ್ಯೋಗ ಖಾತರಿ ಹಾಗೂ ಗ್ರಾಮ ಆಡಳಿತಾಧಿಕಾರಿ, ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ ಎಲ್ಲಾ ಸಿಬ್ಬಂದಿಗಳನ್ನು ಹಾಗೂ ಶಾಲಾ ಮುಖ್ಯ ಶಿಕ್ಷಕರುಗಳನ್ನು ಸ್ಮರಣಿಕೆಯೊಂದಿಗೆ ವಿಆರ್‌ಡಬ್ಲ್ಯು ಗಣೇಶ್ ಅವರು ಗೌರವಿಸಿದರು.


ವಿಕಲಚೇತನರಿಗಾಗಿ ತಲಾ 5 ಕೆ.ಜಿ ಯಂತೆ ಅಕ್ಕಿ ನೀಡಿದ ಸ್ಟೀಪನ್ ರೊಡ್ರಿಗಸ್‌ ಸಹಿತ ವಿಕಲಚೇತನರ ಸೇವೆಗಾಗಿ ನೆರವು ನೀಡಿದ ಎಲ್ಲರಿಗೂ ಸ್ಮರಣಿಕೆ ನೀಡಲಾಯಿತು. ವಿಕಲಚೇತನರು ಮತ್ತು ಪೋಷಕರ ‌ಆರೋಗ್ಯ ತಪಾಸಣೆಯನ್ನೂ‌‌ ನಡೆಸಲಾಯಿತು.
ಇತರ ಪಂಚಾಯತ್ ಗಳಿಂದ ಆಗಮಿಸಿದ ಪುನರ್ವಸತಿ ಕಾರ್ಯಕರ್ತರಾದ ವಿಪುಲ್ ಪೂಜಾರಿ ಉಜಿರೆ, ಚಿರಂಜೀವಿ ಕಣಿಯೂರು ಇವರನ್ನೂ ಪುರಸ್ಕರಿಸಲಾಯಿತು.

LEAVE A REPLY

Please enter your comment!
Please enter your name here