







ಶಿಬಾಜೆ: ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ 64ವರ್ಷದ ಬಳಿಕ ಶತ ಚಂಡಿಕಾ ಯಾಗ ನಡೆಯುತ್ತಿದ್ದು ಇಂದು (ಫೆ 05)ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಯಾಗ ಆರಂಭಗೊಂಡಿದೆ. ನಾಳೆ( ಫೆ. 06)ರಂದು ಮುಂಜಾನೆ 6:30ರಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ 11ಗಂಟೆಗೆ ಯಾಗದ ಪೂರ್ಣಾಹುತಿ ನಡೆಯಲಿದೆ.



ಜಿಲ್ಲೆಯ ನಾನಾ ಕಡೆಗಳಿಂದ ಅಪಾರ ಭಕ್ತ ಸಮೂಹ ಕ್ಷೇತ್ರಕ್ಕೆ ಹರಿದು ಬರುತ್ತಿರುವುದು ಗ್ರಾಮಸ್ಥರಿಗೂ ವಿಶೇಷ ಎನಿಸಿದ್ದು ನಾಳೆ ನಡೆಯಲಿರುವ ಪೂರ್ಣಾಹುತಿ ಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಡಳಿತ ಮಂಡಳಿ ತಿಳಿಸಿದೆ.









