








ಬೆಳ್ತಂಗಡಿ: ಸವಣಾಲು ಕಾಳಿಕಾ ಬೆಟ್ಟದ ದುರ್ಗಾ ಕಾಳಿಕಾಂಬ ದೇವಸ್ಥಾನದ ಜ.31ರಂದು ನಡೆದ ವಾರ್ಷಿಕಾ ಜಾತ್ರಾ ಮಹೋತ್ಸವದಂದು ಗಾಯಕ ರಮ್ಲಾನ್ ಹಾಡಿರುವ ಸವಣಾಲ ಮಹಿಮೆ ಧ್ವನಿಸುರುಳಿ ಬಿಡುಗಡೆಗೊಂಡಿತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗಣೇಶ ಭಂಡಾರಿ, ಶಿವಪ್ರಸಾದ್, ಪ್ರಭಾಕರ ಭಟ್ಟು ಗುತ್ತಿನ ಬೈಲು ಉಪಸ್ಥಿತರಿದ್ದರು. ರಮ್ಲಾನ್ ರವರಿಗೆ ಲೋಕೇಶ್ ಹೆಗ್ಡೆ, ದೀಪಕ್, ಪ್ರಸಾದ್, ಜಗದೀಶ್ ನಾಯ್ಕ ಸಹಕಾರ ನೀಡಿದ್ದರು. ಇದಕ್ಕೆ ರಮ್ಲಾನ್ ರವರೆ ಸಾಹಿತ್ಯ ಬರೆದಿದ್ದರು.









