ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ-ಕೋರ್ಟ್ ನಲ್ಲಿ ಹಿರಿಯ ವಕೀಲ ಸಿ.ವಿ. ನಾಗೇಶ್- 1 ಗಂಟೆಗೂ ಅಧಿಕ ಕಾಲ ವಾದ ಮಂಡನೆ-ಆಕ್ಷೇಪಣೆ ಮತ್ತು ಮುಂದಿನ ವಾದ ಫೆ. 13ಕ್ಕೆ ಮುಂದೂಡಿಕೆ

0

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದಿಂದ ಧರ್ಮಸ್ಥಳ ಕ್ಷೇತ್ರದವರನ್ನು‌ ಸಂತ್ರಸ್ತರೆಂದು ಪರಿಗಣಿಸಬೇಕೆಂದು ಧರ್ಮಸ್ಥಳ ಕ್ಷೇತ್ರದ ಪರ ಸಲ್ಲಿಸಿರುವ ಅರ್ಜಿಯ ಪರವಾಗಿ ಹಿರಿಯ ವಕೀಲ ಕೆ ಸಿ ನಾಗೇಶ್ ರವರು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಮುಂದೆ ವಿಸ್ತೃತವಾಗಿ ವಾದ ಮಂಡಿಸಿದರು. ಸಂತ್ರಸ್ತ ಅಂದ್ರೆ ಹೇಗೆ ಅನ್ನುವುದರ ಬಗ್ಗೆ ವಿಸ್ತೃತವಾಗಿ ವಾದದಲ್ಲಿ ಉಲ್ಲೇಖಿಸಿದ್ದರು. ಧರ್ಮಸ್ಥಳ ಕ್ಷೇತ್ರದವರನ್ನು ಪಾರ್ಟಿ ಮಾಡುವ ಬಗ್ಗೆ ಚಿನ್ನಯ್ಯ ಪರ ವಕೀಲರು ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಸಿ ವಿ ನಾಗೇಶ್ ವಾದಕ್ಕೆ ಆಕ್ಷೇಪಣೆ ಸಲ್ಲಿಸಿ ವಾದ ಮಾಡಲು ತಿಮರೋಡಿ ಪರ ವಕೀಲ ವಿಜಯ್ ವಾಸು ಪೂಜಾರಿಯವರಿಗೆ ದಿನಾಂಕ 13-2-2026ರಂದು ಅವಕಾಶ ಕಲ್ಪಿಸಿದ್ದು, ವಿಚಾರಣೆ ಫೆಬ್ರವರಿ 13ಕ್ಕೆ ಮುಂದೂಡಲಾಗಿದೆ. ಎಸ್ ಐ ಟಿ ಪರ ವಕೀಲ ದಿವ್ಯರಾಜ್ ಹೆಗ್ಡೆ ಧರ್ಮಸ್ಥಳ ಪರ ಸಲ್ಲಿಸಿದ್ದ ಹೆಚ್ಚುವರಿ ಪಿರ್ಯಾದಿದಾರರನ್ನಾಗಿ ಮಾಡಬೇಕೆಂಬ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ.‌ ಜೊತೆಗೆ, ಎರಡೂ ಬಣದವರ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದ್ದಾರೆ. ಆರೋಪಿ ಚಿನ್ನಯ್ಯ ಕೂಡ ಕೋರ್ಟ್ ಗೆ ಹಾಜರಾಗಿದ್ದನು.ಧರ್ಮಸ್ಥಳದ ಪರ ಹಿರಿಯ ವಕೀಲ ಸಿ ವಿ ನಾಗೇಶ್, ರಾಜಶೇಖರ್ ಹಿಲಿಯಾರ್, ಮಹೇಶ್ ಕಜೆ ಮುಂತಾದವರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here