






ಬಳಂಜ.ನಾಲ್ಕೂರು ಗ್ರಾಮದ ಕಂಚಿನಡ್ಕ ಶ್ರೀ ನಾಗಬ್ರಹ್ಮ ಹಾಗೂ ಮೂಜಿಲ್ನಾಯ ಬ್ರಹ್ಮ ಸ್ಥಾನದ ವಾರ್ಷಿಕ ಪ್ರತಿಷ್ಠಾ ದಿನದ ಅಂಗವಾಗಿ ಫೆಬ್ರವರಿ 4 ರಂದು ಆಶ್ಲೇಷ ಬಲಿ, ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ದೈವಗಳಿಗೆ ತಂಬಿಲ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಸೇವೆಯಲ್ಲಿ ಭಾಗವಹಿಸಬೇಕಾಗಿ ಸಮಿತಿಯ ಅಧ್ಯಕ್ಷರಾದ ವಿನಯ ಶೆಟ್ಟಿ ಏಯಿಕುರಿ ತಿಳಿಸಿದ್ದಾರೆ.



ಪ್ರಕೃತಿ ವನಸಿರಿಯ ಮದ್ಯೆ ನಾನಿಂಜ ಮಲೆಯ ತಪ್ಪಲಿನಲ್ಲಿ ಕಂಗೊಳಿಸುತ್ತಿರುವ ಈ ನಾಗ ಸಾನಿಧ್ಯದ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತೀ ಸಂಕ್ರಮಣ ದಿನಸ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ವಿನಯ ಶೆಟ್ಟಿಯವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಪ್ರಭಾಕರ ಪೂಜಾರಿ ಖಂಡಿಗ ಕಾರ್ಯದರ್ಶಿಯಾಗಿ ದುಡಿಯುತ್ತಿದ್ದಾರೆ.ಸಮಿತಿಯ ಎಲ್ಲಾ ಸದಸ್ಯರು ಕೈ ಜೋಡಿಸುತ್ತಿದ್ದಾರೆ.









