ಗಂಧರ್ವ ಮಹಾವಿದ್ಯಾಲಯ ನಡೆಸಿದ ನೃತ್ಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಶ್ರೀದೇವಿ, ಶ್ರೀಪ್ರಜ್ಞಾ

0

ಬೆಳಾಲು: ಗಂಧರ್ವ ಮಹಾವಿದ್ಯಾಲಯ ಪುಣೆ, ನಡೆಸುವ ಭರತನಾಟ್ಯ ಪ್ರವೇಶಿಕ ಪ್ರಥಮ ಪರೀಕ್ಷೆಯಲ್ಲಿ ಬೆಳಾಲಿನ ‘ಈಶ ಕಲಾ ಪ್ರತಿಷ್ಟಾನ’ ನೃತ್ಯ ತರಗತಿಯ ಶ್ರೀದೇವಿ ಅತ್ಯುನ್ನತ ಶ್ರೇಣಿಯಲ್ಲಿ ಹೆಚ್ಚು ಅಂಕ ಪಡೆದು ತರಗತಿಗೆ ಪ್ರಥಮ ಸ್ಥಾನ ಪಡೆದಿದ್ದು, ಸದ್ವಿ, ಮೋಕ್ಷ, ಶ್ರೇಷ್ಠ ಉಮೇಶ್,ಅದ್ವಿತ, ಇಂಚರ, ಸಾನ್ವಿ ಉನ್ನತ ಅಂಕ ಪಡೆದಿರುತ್ತಾರೆ.ಅಲ್ಲದೇ ಪರೀಕ್ಷೆ ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರವೇಶಿಕ ಪೂರ್ಣ ವಿಭಾಗದ ಪರೀಕ್ಷೆಯಲ್ಲಿ ಶ್ರೀಪ್ರಜ್ಞಾ ಕೆದಿಲಾಯ ಅತ್ಯುನ್ನತ ಅಂಕದೊಂದಿಗೆ ತರಗತಿಗೆ ಪ್ರಥಮ ಸ್ಥಾನ ಹಾಗೂ ಪರೀಕ್ಷಾ ಕೇಂದ್ರಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here