ನಾರಾವಿ: ಸೂರ್ಯನಾರಾಯಣ ದೇವಸ್ಥಾನ ಬ್ರಹ್ಮಕಲಶೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

0

ನಾರಾವಿ: ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಅಳದಂಗಡಿ ಸತ್ಯ ದೇವತೆ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರು ಫೆ.1 ರಂದು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ, ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಕೃಷ್ಣತಂತ್ರಿ, ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ, ಬ್ರಹ್ಮಕಲಶೋತ್ಸವ ಕಾರ್ಯಧ್ಯಕ್ಷ ಮಹಾವೀರ್ ಜೈನ್, ಜಗದೀಶ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ, ಉಗ್ರಾಣ ಸಮಿತಿಯ ಸಂಚಾಲಕಿ ಚಂದ್ರಿಕಾ, ನಾರಾವಿ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಎನ್ ಶ್ರೀನಿವಾಸ ವಾಸುದೇವ, ಜಗದೀಶ್ ಹೆಗ್ಡೆ, ಎನ್ ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್ ತುಂಬೆಗುಡ್ಡೆ, ಯಶೋಧ, ರಶ್ಮಿ, ಪ್ರಮುಖರಾದ ಡಾ.ವಿನೋಧ, ಸಂತೋಷ್, ರವಿ ಹೆಗ್ಡೆ, ಶೀನ ಪೂಜಾರಿ, ರತ್ನಾಕರ್ ಭಟ್, ಪ್ರಸಾದ್, ಪ್ರಮೋದ್ ಕುಮಾರ್, ಸದಾನಂದ ಬಂಗೇರ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here