







ಮಚ್ಚಿನ: ಗ್ರಾಮ ಪಂಚಾಯತ್ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಂಯೋಗದಲ್ಲಿ ಆಧಾರ್ ಶಿಬಿರವು ಸಮುದಾಯ ಭವನ ಬಳ್ಳಮಂಜದಲ್ಲಿ ನಡೆಯಿತು.



ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ ಇದರ ಅಧ್ಯಕ್ಷ ನಾರಾಯಣ ಪೂಜಾರಿ ಅವರು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಪ್ರಮೋದ್ ಕುಮಾರ್, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹರ್ಷ ಬಳ್ಳಮಂಜ, ಗೌರವ ಸಲಹೆಗಾರ ಸುಧೀರ್ ಶೆಟ್ಟಿ ಕೋರಬೆಟ್ಟು, ಗೋಪಾಲ ಪೂಜಾರಿ ಕೊಲಾಜೆ, ಬ್ರಾಂಚ್ ಪೋಸ್ಟ್ ಮಾಸ್ಟರ್ ಸಂತೃಪ್ತಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಭವ್ಯ, ಗುಣವತಿ, ಯಕ್ಷಿತಾ, ಸಚಿನ್ ಅಂಚೆ ವಿತರಕರಾದ ಅಕ್ಷಯ್ ಬಳ್ಳಮಂಜ ಉಪಸ್ಥಿತರಿದ್ದರು.
✍️ಹರ್ಷ ಬಳ್ಳಮಂಜ









