ಪುಂಜಾಲಕಟ್ಟೆ:10 ದಿನದ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಗಾರ

0

ಪುಂಜಾಲಕಟ್ಟೆ: ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿ ಮಂಗಳೂರು ಮತ್ತು ಬಿಎಂಎಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಕೃಷಿ ಮಜ್ದೂರ್ ಸಂಘ ಇದರ ವತಿಯಿಂದ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಗಾರ ಜ.12 ರಿಂದ ಜ.21 ವರೆಗೆ ಬಂಟ್ವಾಳ ತಾಲೂಕಿನ ಚೇತನ್ ಕುಮಾರ್ ಅವರ ತೋಟದಲ್ಲಿ ನಡೆಯಿತು.

ಇದರ ಸಮಾರೋಪ ಸಮಾರಂಭ ಕೊಡಂಬೆಟ್ಟು ಶ್ರೀ ರಾಮಾಂಜನೇಯ ಭಜನಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟದ ಮಾಲೀಕ ಚೇತನ್ ಅವರು ವಹಿಸಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪಿಂಗ್ ಕೃಷಿ ಮಜ್ದೂರ್ ಸಂಘ ಇದರ ಪ್ರಧಾನ ಕಾರ್ಯದರ್ಶಿ ಹರೀಶ್ ಜೆಕೆ ಅವರು ಸಂಘದ ಉದ್ದೇಶ ಮತ್ತು ಕಾರ್ಮಿಕರಿಗೆ ಇಷ್ಟರ ತನಕ ತೆಗೆಸಿಕೊಟ್ಟಂತಹ ಸೌಲಭ್ಯಗಳ ಮತ್ತು ರಬ್ಬರ್ ಬೋರ್ಡ್ ನಿಂದ ಸಿಗುವಂತಹ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.

ತೋಟದ ಮಾಲೀಕರಾದ ಚೇತನ್ ಅವರು ತಮ್ಮ ಟ್ಯಾಪಿಂಗ್ ಟ್ರೈನಿಂಗ್ ನ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಬಂಟ್ವಾಳ ತಾಲೂಕು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಕಾಶ್ ಇನ್ನು ಮುಂದೆ ಟ್ಯಾಪಿಂಗ್ ಕೌಶಲದಿಂದ ಮಾಡಬೇಕು ಇದರ ಬಗ್ಗೆ ಅವರ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಕೆ.ಎಪ್ .ಡಿ.ಸಿ ರೇಂಜರ್ ಶಿವಜ್ಞ ರಬ್ಬರ್ ಮಂಡಳಿಯಿಂದ ರಬ್ಬರ್ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು .

ಟ್ಯಾಪಿಂಗ್ ತರಬೇತಿದಾರ ಉಮೇಶ್ ಅವರು ಪ್ರತ್ಯಕ್ಷವಾಗಿ ಟ್ಯಾಪಿಂಗ್ ಉತ್ತಮ ಕೌಶಲದಿಂದ ಮಾಡಬಹುದಾದ ಕಲೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ರಬ್ಬರ್ ಮಂಡಳಿಯ ಅಧಿಕಾರಿ ದೀಪ್ತಿ ಅವರು ಒಂದು ವಾರದಲ್ಲಿ ತರಬೇತಿಯನ್ನು ಪಡೆದ ಶಿಬಿರಾರ್ಥಿಗಳಿಗೆ ಪರೀಕ್ಷೆಯನ್ನು ಮಾಡಿ ಅಂಕಗಳನ್ನು ನೀಡಿದರು. ಇದರಲ್ಲಿ ಪ್ರಥಮ ದ್ವಿತೀಯ ತೃತೀಯ ಬಂದವರಿಗೆ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯನ್ನು ಉಚಿತವಾಗಿ ನೀಡಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಕೃಷಿ ಮಜ್ದೂರ್ ಸಂಘದಲ್ಲಿ ಸದಸ್ಯತ್ವವನ್ನು ಪಡೆದ ಶಿಬಿರಾರ್ಥಿಗಳಿಗೆ ಅವರ ಗುರುತಿನ ಚೀಟಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ರಬ್ಬರ್ ಕಾರ್ಮಿಕರ ಜಿಲ್ಲಾ ಸಮಿತಿಯ ಪದಾಧಿಕಾರಿ ಅರುಣ್ ವರ್ಧನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಆನಂದ್ ರಾಜ್ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಅಯ್ಯಪ್ಪ ಜಿಲ್ಲಾ ಖಜಾಂಚಿ ಜಿಲ್ಲಾ ಉಪ ಕಾರ್ಯದರ್ಶಿಯಾದ ನಾಗೇಂದ್ರ ಇವರು ಭಾಗವಹಿಸಿದ್ದರು. ರಾಜೇಶ್ ಅವರು ಸಹಕರಿಸಿಧದರು. ಬಂಟ್ವಾಳ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು. ತಾಲೂಕು ಅಧ್ಯಕ್ಷರಾಗಿ ಚೇತನ್ ಕುಮಾರ್, ಕಾರ್ಯದರ್ಶಿಯಾಗಿ ಜೀವರಾಜ್ ವಿ , ಖಜಾಂಜಿಯಾಗಿ ಚಂದ್ರಹಾಸ ಮಹಿಳಾ ಘಟಕದಿಂದ ಸಂಚಾಲಕರಾಗಿ ಶೋಭಾ ಅವರನ್ನು ಆಯ್ಕೆ ಮಾಡಲಾಯಿತು. ಕಮಲಾಕ್ಷ ಅವರು ಸ್ವಾಗತಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಜೆಕೆ ವಂದಿಸಿದರು.

LEAVE A REPLY

Please enter your comment!
Please enter your name here