







ಧರ್ಮಸ್ಥಳ : 77ನೇ ವರ್ಷದ ಗಣರಾಜೋತ್ಸವ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹೇಶ್ ಆಚಾರ್ಯ , ಉದ್ಯಮಿಗಳು ಅಜಿಕುರಿ ಧರ್ಮಸ್ಥಳ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಗಣರಾಜ್ಯೋತ್ಸವ ದಿನದ ಶುಭ ಮಾತುಗಳನ್ನಾಡಿದರು.



ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕೆ.ನಂದ ಇವರು ಧ್ವಜಾರೋಹಣ ನೆರವೇರಿಸಲು ಕೈ ಜೋಡಿಸಿದರು. ಮತ್ತು ಅಧ್ಯಕ್ಷೀಯ ನುಡಿಗಳನ್ನಾಡಿದರು.ಮಹಾತ್ಮ ಗಾಂಧೀಜಿ ಮತ್ತು ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಗೌರವವನ್ನು ಸೂಚಿಸಲಾಯಿತು . ಶಾಲಾ ನಾಯಕಿ ಅನನ್ಯ ನೇತೃತ್ವದಲ್ಲಿ ಘೋಷಣೆಯನ್ನು ಮಕ್ಕಳು ಹೇಳುವ ಮೂಲಕ ಹುತಾತ್ಮರಿಗೆ ಗೌರವವನ್ನು ಸಲ್ಲಿಸಲಾಯಿತು ಮತ್ತು ಅನನ್ಯ ಮತ್ತುಇಶಾ ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು.ಗೌರವ ಸಲಹೆಗಾರ ರಾಜೇಂದ್ರ ಅಜ್ರಿ ಶುಭವನ್ನು ಹಾರೈಸಿದರು., ನವೀನ್ ಚಂದ್ರ ಶೆಟ್ಟಿ, ಸುಭಾಷ್ ಚಂದ್ರ ಪಂಚವಟಿ, ಪವಿತ್ರ ಸುಕುಮಾರ ಶೆಟ್ಟಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಚಂದ್ರಾವತಿ,ಪ್ರಭಾರ ಮುಖ್ಯ ಶಿಕ್ಷಕರಾದ ಪುಷ್ಪಾ ಎನ್, ಎಸ್ ಡಿ ಎಂ ಸಿ ಸದಸ್ಯರು ಧ್ವಜಕಟ್ಟೆಯ ಬಳಿ ನೆರೆದಿದ್ದರು. ಶಾಲಾ ಶಿಕ್ಷಕ ವೃಂದದವರು, ಪೋಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪುಷ್ಪಾ ಜ್ಞಾನದೀಪ ತೇಜಸ್ವಿ ಮತ್ತು ಗೌರವ ಶಿಕ್ಷಕಿ ರಾಜಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.









