ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳ್ತಂಗಡಿ ಘಟಕದಿಂದ ಗಣರಾಜ್ಯೋತ್ಸವ ದಿನಾಚರಣೆ-47 ಮಾಜಿ ಸೈನಿಕರು ಭಾಗಿಯಾಗಿ ಗಣರಾಜ್ಯ ಆಚರಿಸುತ್ತಿರುವುದು ತಾಲೂಕು ಹೆಮ್ಮೆ ಪಡುವ ಸಂಗತಿ

0

ಉಜಿರೆ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳ್ತಂಗಡಿ ಘಟಕದಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಕುಮಾರಕೃಪಾ ವಾಣಿಜ್ಯ ಸಂಕೀರ್ಣದಲ್ಲಿ ಜ.26ರಂದು ಆಚರಿಸಲಾಯಿತು.

47 ಮಾಜಿ ಸೈನಿಕರು ಸಾಮೂಹಿಕವಾಗಿ ಸೈನಿಕ ಸಮವಸ್ತ್ರ ಧರಿಸಿ ಸಂಭ್ರಮದಿಂದ ಗಣರಾಜ್ಯ ಆಚರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಡಾ. ಗೋಪಾಲಕೃಷ್ಣ ಕಾಂಚೋಡು, ಅಧ್ಯಕ್ಷ ಎನ್. ಪಿ. ತಂಗಚ್ಚನ್,ಕಾರ್ಯದರ್ಶಿ ಸುರೇಶ್ ಗೌಡ, ಪ್ರಧಾನ ಸಲಹೆಗಾರರಾದ ಕೆ ಎಸ್ ಮಂಜುನಾಥ್ ಗೌಡ, ಹರೀಶ್ ರೈ ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಧ್ವಜಾರೋಹಣದ ನಂತರ ಸಂಘದ ಕಛೇರಿಯನ್ನು ತಾಲೂಕು ಘಟಕದ ಪ್ರಧಾನ ಗೌರವಾಧ್ಯಕ್ಷ ಎ.ಕೆ. ಶಿವನ್ ಅವರು ದೀಪಬೆಳಗಿಸಿದರು. ಶುಭ ಹಾರೈಸುವುದರೊಂದಿಗೆ ಸಿಹಿ ಹಂಚಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here