






ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪರೀಕ ಸೌಖ್ಯವನದಲ್ಲಿ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾರ್ಶಿವಾದಗಳೊಂದಿಗೆ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.



ಬೆಂಗಳೂರಿನಿಂದ ಪ್ರತೀ ವರ್ಷವು ಸೌಖ್ಯವನಕ್ಕೆ 30 ಕ್ಕಿಂತಲೂ ಹೆಚ್ಚು ಸಾಧಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆದುಕೊಂಡು ಬಂದು ಪ್ರಕೃತಿ ಚಿಕಿತ್ಸೆಯ ಬಗ್ಗೆ ಅರಿವನ್ನು ಮೂಡಿಸಿ, ಆರೋಗ್ಯದ ಮಹತ್ವವನ್ನು ಸಮಾಜಸೇವೆಯ ರೂಪವಾಗಿ ಕೈಗೊಳ್ಳುತ್ತಾ ಬಂದಿರುವ ಎಂ ಜಗದೀಶ್ ಅವರು ಧ್ವಜಾರೋಹಣವನ್ನು ನೆರವೇರಿಸಿ, ತಮ್ಮ ಶುಭನುಡಿಗಳಲ್ಲಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಸೌಖ್ಯವನವು ಸಾರ್ವಜನಿಕರಿಗೆ ಆರೋಗ್ಯ ಭಾಗ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಹಾಗೂ ಸೌಖ್ಯವನದ ಆರೋಗ್ಯಯುತ ವಾತವರಣ, ಚಿಕಿತ್ಸೆ, ಉತ್ತಮ ಸಿಬ್ಬಂದಿಗಳಿಂದ ನಗುಮೊಗದ ಸೇವೆಯು ದೇಶ-ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ ಎಂದು ತಿಳಿಸಿದರು.ಇನ್ನೋರ್ವ ಅತಿಥಿಯಾಗಿದ್ದ ಕೆ ಆರ್ ಪ್ರಕಾಶ್ ಬೆಂಗಳೂರು ಇವರು ಗಣರಾಜ್ಯೋತ್ಸವದ ಶುಭಾವಸರದಲ್ಲಿ ಉತ್ತಮ ಆರೋಗ್ಯವನ್ನು ಪಡೆಯಲು ಸೌಖ್ಯವನದಲ್ಲಿ ಪ್ರತೀ ವರ್ಷವೂ ದಾಖಲಾಗಿ ಪ್ರಕೃತಿ ಚಿಕಿತ್ಸೆಯನ್ನು ಪಡೆದು, ಹೆಚ್ಚಿನ ಜನರಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಿ ಪ್ರೇರಣೆಗೊಳಿಸುತ್ತಾ ಬಂದಿರುವುದು ನಮಗೆ ಅತ್ಯಂತ ಸಂತೋಷ ಮತ್ತು ನೆಮ್ಮದಿಯನ್ನು ನೀಡಿದೆ ಎಂದು ಹೇಳಿದರು.ಸೌಖ್ಯವನದ ಮುಖ್ಯವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದಿಂದ ಸ್ಥಾಪನೆಯಾದ ಈ ಸಂಸ್ಥೆಯು ಅತ್ಯಂತ ಉತ್ತಮ ಗುಣಮಟ್ಟದ ಪ್ರಕೃತಿ ಚಿಕಿತ್ಸೆಯನ್ನು ನೀಡಿ ಪೂಜ್ಯರ ಕನಸನ್ನು ಸಕಾರಗೊಳಿಸುತ್ತಿದೆ ಎಂದರು.
ಸ್ಥಾನಿಕ ವೈದ್ಯಾಧಿಕಾರಿಯಾದ ಡಾ.ಶೋಭಿತ್ ಶೆಟ್ಟಿಯವರು ದೇಶದಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವಲ್ಲಿ ಸೈನಿಕರ ಪಾತ್ರವು ಅತ್ಯಂತ ಮಹತ್ವದಾಗಿದೆ ಮತ್ತು ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶುಭಹಾರೈಸಿದರು. ಡಾ.ಪೂಜಾ ಜಿ ಅವರು ಶುಭನುಡಿಗಳನ್ನಾಡಿದರು. ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಗೀತೆಯನ್ನು ಎಲ್ಲರೂ ಹಾಡಿ ಗೌರವ ಸೂಚಿಸಿದರು.ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮದ ಅತಿಥಿ ಗಣ್ಯರನ್ನು ಸ್ವಾಗತಿಸಿ ನಿರೂಪಣೆಯನ್ನು ಮಾಡಿ ಎಲ್ಲರಿಗೂ ಧನ್ಯವಾದವನ್ನಿತ್ತರು.









