






ಉಜಿರೆ : ಉಜಿರೆ: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸಲಾಯಿತು.



ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಟಿ.ಧ್ವಜಾರೋಹಣ ನೆರವೇರಿಸಿ ಸಂವಿಧಾನದ ಮಹತ್ವ, ವಿಶೇಷತೆಯ ಬಗ್ಗೆ ತಿಳಿಸಿದರು. ಎನ್.ಸಿ.ಸಿ ಅಧಿಕಾರಿಗಳಾದ ಸದಾನಂದ ಮತ್ತು ವಿವೇಕ್ ಜೈನ್, ಎನ್.ಸಿ.ಸಿ ಆರ್ಮಿ ಮತ್ತು ನೇವಲ್ ಕೆಡೆಟ್ ಗಳು ಹಾಜರಿದ್ದು ರತ್ನವರ್ಮ ಕ್ರೀಡಾಂಗಣದಲ್ಲಿ ಜರುಗಿದ ಪಥಸಂಚಲನದಲ್ಲಿ ಭಾಗವಹಿಸಿದರು. ಶಿಕ್ಷಕ ಚಂದ್ರಶೇಖರ ಸ್ವಾಗತಿಸಿದರು. ಧೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ಧನ್ಯವಾದ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕವೃಂದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು









