ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಮನರೇಗಾ ಉಳಿಸಿ ಆಂದೋಲನದ ಪೂರ್ವಭಾವಿ ಸಭೆ

0

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ, ಪಾರಂಕಿ, ಕುಕ್ಕಳ, ಗ್ರಾಮದ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ, ಮನರೇಗಾ, ಉಳಿಸಿ ಅಂದೋಲನದ ಪೂರ್ವಭಾವಿ ಸಭೆ ಜ. 25ರಂದು 5:30ಕ್ಕೆ ಬಂಗೇರಕಟ್ಟೆ ಸಾಲುಮರ ಬ್ಲೇನಿ ಸಿ ಡಿಸೋಜಾರವರ ಮನೆಯ ಅವರಣದಲ್ಲಿ ಪಂಚಾಯತ್ ಸಮಿತಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಪಡ್ಪು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಭಾಗವಹಿಸಿ ಪಕ್ಷ ಸಂಘಟನೆಯ ಬಗ್ಗೆ ಹಾಗೂ ಮುಂಬರುವ ಚುನಾವಣೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಕುವೆಟ್ಟು ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾದ ಪ್ರಮೋದ್ ಬಳ್ಳಮಂಜ, ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮದ್ ಶಾಪಿ, ಯುವ ಕಾಂಗ್ರೆಸ್ ನ ಅಧ್ಯಕ್ಷ ನವೀನ್ ಗೌಡ, ಬೂತ್ ಅಧ್ಯಕ್ಷರಾದ ರೂಪೇಶ್ ಪದವು, ಅಬ್ದುಲ್ ರೆಹಮಾನ್, ಕೋಟ್ಯಪ್ಪ ಪೂಜಾರಿ, ಪ್ರಶಾಂತ್ ಪೂಜಾರಿ ಕುಕ್ಕಲ, ಪಕ್ಷದ ಹಿರಿಯರಾದ ರಫೈಲ್ ಡಿ ಸೋಜ, ಮಾಜಿ ಸೈನಿಕರಾದ ಲೆನ್ಸನ್ ಲಾಸ್ರದೋ, ಬ್ಲಾನಿ ಸಿ ಡಿಸೋಜಾ, ಉಪಸ್ಥಿತರಿದ್ದು, ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಜೆರಾಲ್ಡ್ ಸ್ವಾಗತಿಸಿದರು. ಹೆರಾಲ್ಡ್ ಧನ್ಯವಾದಗೈದರು.

LEAVE A REPLY

Please enter your comment!
Please enter your name here