






ಅಳದಂಗಡಿ: ದ.ಕ.ಜಿಲ್ಲಾ ಪ್ರವಾಸದಲ್ಲಿರುವ ಆರೋಗ್ಯ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜ.25ರಂದು ಅಳದಂಗಡಿಯ ಸತ್ಯದೇವತಾ ದೈವಸ್ಥಾನಕ್ಕೆ ಭೇಟಿ ನೀಡಿದರು.



ಈ ವೇಳೆ ಸಚಿವರನ್ನು ಸತ್ಯದೇವತಾ ದೈವಸ್ಥಾನದ ಆಡಳಿತ ಮೋಕ್ತೇಸರ ಶಿವಪ್ರಸಾದ್ ಅಜಿಲ ಸ್ವಾಗತಿಸಿ ಬರಮಾಡಿಕೊಂಡರು. ದೈವಸ್ಥಾನದ ಮುಂಭಾಗದಲ್ಲಿರುವ ನೂತನ ಬೃಹತ್ ಗಂಟೆಯನ್ನು ಬಡಿದು ಸಚಿವರು ದೈವಸ್ಥಾನ ಪ್ರವೇಶಿಸಿದರು.ಈ ವೇಳೆ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ, ದೀಪಕ್ ನಾಲ್ಕೂರು, ಪ್ರಜ್ವಲ್ ಅಳದಂಗಡಿ ಮುಂತಾದವರು ಜೊತೆಗಿದ್ದರು.










