ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಬೆಳ್ತಂಗಡಿ ಘಟಕದ ಹತ್ತನೇ ವಾರ್ಷಿಕೋತ್ಸವ

0

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಬೆಳ್ತಂಗಡಿ ಘಟಕದ ಹತ್ತನೇ ವಾರ್ಷಿಕೋತ್ಸವವು ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅಭ್ಯಾಗತರಾಗಿ ಶಾಸಕ ಹರೀಶ್ ಪೂಂಜ, ಉಜಿರೆ ಜನಾರ್ಧನ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ನಾಣ್ಯಪ್ಪ ಪೂಜಾರಿ, ದಿನಕರ ಶೆಟ್ಟಿ ಬರೋಡಾ, ಬಿ ಭುಜಬಲಿ ಧರ್ಮಸ್ಥಳ, ಸಂಚಾಲಕರು ಕಿರಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಶಿತಿಕಂಠ ಭಟ್ ಉಜಿರೆ ಮತ್ತಿತರ ಗಣ್ಯರು ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಾವಂಜೆ ಮೇಳದ ಹಿರಿಯ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಅವರನ್ನು ಸನ್ಮಾನಿಸಲಾಯಿತು. ಪಟ್ಲ ಫೌಂಡೇಶನ್ ಟ್ರಸ್ಟಿಗೆ 20 ದೇಣಿಗೆ ನೀಡಿದ ಮಹಾದಾನಿಗಳನ್ನು ಗೌರವಿಸಲಾಯಿತು. ಪೃಥ್ವಿ ಮತ್ತು ಮುರಳೀಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಘಟಕದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ವಂದಿಸಿದರು. ಪಾವಂಜೆ ಮೇಳದವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.

LEAVE A REPLY

Please enter your comment!
Please enter your name here