






ಬೆಳ್ತಂಗಡಿ; ವಿಕಲಚೇತನರಿಗೆ ನೆರವು ನೀಡುವಲ್ಲಿ ನಾನು ಜಿ.ಪಂ ಅಧ್ಯಕ್ಷನಾಗಿದ್ದಾಗ ಅತೀಹೆಚ್ಚು ಶ್ರಮಿಸಿದ್ದೆ. ಪಂಚಾಯತ್ ನಿಧಿಯಿಂದ 3 ಶೇ. ಅನುದಾನ ಮೀಸಲಿರಿಸುವ ಮಿತಿ 5 ಶೇಕಡಕ್ಕೆ ಏರಿಕೆ ಯಾಗಿದ್ದು ಸಂತೋಷದಾಯಕ. ಆದರೆ ಇದು ಕನಿಷ್ಠ ಮಿತಿ ಮಾತ್ರ. ಇದುವೇ ಅಂತಿಮವಲ್ಲ. ಹೆಚ್ಚುವರಿಯಾಗಿ ಎಷ್ಟು ಬೇಕಾದರೂ ಹಣ ವಿನಿಯೋಗಿಸಬಹುದಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ ಹೇಳಿದರು.
ರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಅಂಗವಾಗಿಗ್ರಾ.ಪಂ ಇಂದಬೆಟ್ಟು ವತಿಯಿಂದ ನಡೆದ ವಿಕಲಚೇತನರ ಸಮನ್ವಯ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸುಳ್ಯ ತಾಲೂಕಿನ ವಲಿಕಜೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಪುಟ್ಟಣ, ವಿಕಲಚೇತನರಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.ತಾಲೂಕು ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ ಇಲಾಖಾ ಮಾಹಿತಿ ನೀಡಿದರೆ, ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಶ್ರಫ್ ಆಲಿಕುಂಞಿ ಮುಂಡಾಜೆ ಬ್ಯಾಂಕಿನ ಮಾಹಿತಿ ನೀಡಿದರು.ಗ್ರಾಮ ಮಟ್ಟದಲ್ಲಿ ಸಾಧನೆ ಮಾಡಿದ ವಿಕಲಚೇತನರನ್ನು ಈ ವೇಳೆ ಪುರಸ್ಕರಿಸಲಾಯಿತು.


ಗ್ರಾ.ಪಂ ಅಧ್ಯಕ್ಷೆ ಆಶಲತಾ ಸಭೆಯ ಅಧ್ಯಕ್ಷತೆ ವಹಿಸಿದ್ದು, ತಮ್ಮ ಅವಧಿಯಲ್ಲಿ ವಿಕಲಚೇತನರಿಗಾಗಿ ಕೈಗೊಂಡ ಕಾರ್ಯಗಳ ಬಗ್ಗೆ ಸ್ಮರಿಸಿದರು. ಗ್ರಾಮದ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ಎಂ.ಜೆ ಜೋಸೆಫ್ ವರದಿ ಮತ್ತು ಸಭೆಯ ಪ್ರಸ್ತಾವನೆ ಮಂಡಿಸಿರುವ.ಸದಸ್ಯರಾದ ಆನಂದ ಅಡೀಲು, ವೀರಪ್ಪ ಮೊಯಿಲಿ, ಶ್ರೀಕಾಂತ್, ಹರಿಣಾಕ್ಷಿ, ಸುಮಿತ್ರಾ, ಮೊದಲಾದವರು ಭಾಗಿಯಾಗಿದ್ದರು. ಪಂಚಾಯತ್ ಆಡಳಿತ ಮಂಡಳಿಯವರನ್ನು ವಿಕಲಚೇತನರು ಅಭಿನಂದಿಸಿದರು.ಇಂದಬೆಟ್ಟು ಗ್ರಾಮದಲ್ಲಿ ಒಟ್ಟು48 ಮಂದಿ ವಿಕಲಚೇತನರಿದ್ದು, ಪಂಚಾಯತ್ ನಿಧಿ ಮತ್ತು15 ನೇ ಹಣಕಾಸು ಯೋಜನೆಯಡಿ ಮೀಸಲಿರಿಸಿದ 5 ಶೇ. ಅನುದಾನದಿಂದ ಎಲ್ಲರಿಗೂ ವಿಶೇಷ ಕಿಟ್ ಹಸ್ತಾಂತರಿಸಲಾಯಿತು. ಇತರ ಗ್ರಾ.ಪಂ ಗಳ ಪುನರ್ವಸತಿ ಕಾರ್ಯಕರ್ತರಾದ ವಿಪುಲ್ ಪೂಜಾರಿ, ಚಿರಂಜೀವಿ, ಕಿರ್ತನ್, ಅಬ್ದುಲ್ ಮಜೀದ್, ಆಸಿಫ್, ಸೌಭಾಗ್ಯ ಸೊಸೈಟಿಯ ವ್ಯವಸ್ಥಾಪಕ ಸಹನ್ ಕುಮಾರ್ ಸಹಕರಿಸಿದರು. ಅತಿಥಿಗಳನ್ನು , ಮಾಹಿತಿ ನೀಡಲು ಬಂದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಜನಪ್ರತಿನಿಧಿಗಳನ್ನು ವಿಶೇಷವಾಗಿ ಡ್ರ್ಯಾಗನ್ ಫ್ರುಟ್ಸ್ ಗಿಡದೊಂದಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ ಸ್ವಾಗತಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು. ಬೆಳಾಲಿನ ಪುನರ್ವಸತಿ ಕಾರ್ಯಕರ್ತ ಈರಣ್ಣ ನಿರೂಪಿಸಿದರು.ಚಿತ್ರ ಶಿರ್ಷಿಕೆ; ವಿಕಲಚೇತನ ಸಾಧಕರನ್ನು ಮತ್ತು ತಾಲೂಕು ಸಂಯೋಜಕರನ್ನು ಸನ್ಮಾನಿಸುತ್ತಿರುವುದು.









