ಬಳಂಜ: ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಗಣರಾಜ್ಯೋತ್ಸವ ವಾರ್ಷಿಕ ಕ್ರೀಡಾಕೂಟ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಳಂಜ: ಜ.26 ಸೋಮವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆಯಲ್ಲಿ ನಡೆಯುವ ಗಣರಾಜ್ಯೋತ್ಸವ ವಾರ್ಷಿಕ ಕ್ರೀಡಾಕೂಟ, ಸಾಂಸ್ಕೃತಿಕ, ಹಾಗೂ ನಾಟಕ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಮ್ಮೆಲ್ಲರ ಮಾರ್ಗದರ್ಶಕರು, ಮಾಜಿ ತಾ.ಪಂ ಸದಸ್ಯ ದರ್ಣಪ್ಪ ಪೂಜಾರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಸರ್ವೋದಯ ಫ್ರೆಂಡ್ಸ್ ಹಲವಾರು ವರ್ಷಗಳಿಂದ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ, ಮುಂದೆಯೂ ಕೂಡ ಒಳ್ಳೆ ಕೆಲಸ ಮಾಡುವ ಶಕ್ತಿಯನ್ನು ದೇವರು ನೀಡಲಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಎಂದು ಶುಭ ಹಾರೈಸಿದರು.
ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸುದ್ದಿ ವಾರಪತ್ರಿಕೆಯ ವರದಿಗಾರ ಸದಾನಂದ ಸಾಲಿಯಾನ್, ಎಚ್ ಧರ್ಣಪ್ಪ ಪೂಜಾರಿ ಇವರನ್ನು ಹೂ ನೀಡಿ ಶಾಲು ಹಾಕಿ ಗೌರವಿಸಿದರು.

LEAVE A REPLY

Please enter your comment!
Please enter your name here