






ಚಾರ್ಮಾಡಿ: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ಶಾರದಾ ರವರ ಅಧ್ಯಕ್ಷತೆಯಲ್ಲಿ ಜ.22ರಂದು ಗ್ರಾಮ ಪಂಚಾಯತ್ ಚಾರ್ಮಾಡಿ ಸಭಾಭವನದಲ್ಲಿ ಜರುಗಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಹಿಂದುಳಿದ ವರ್ಗ ಅಲ್ಪಸಂಖ್ಯಾತ ನಿಗಮದ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಜೋಸೆಫ್ ರವರು ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ಗ್ರಾಮ ಸಭೆ ಪ್ರಾರಂಭಕ್ಕೂ ಮೊದಲೇ ಪಂಚಾಯತ್ ಎದುರು ಜೆ. ಜೆ. ಎಂ ಗುತ್ತಿಗೆಗಾರರ ಸಿಬ್ಬಂದಿಗಳಿಗೆ ನಿಲ್ಲಲು ಹಾಕಿರುವ ಪ್ಲಾಸ್ಟಿಕ್ ಬಿಡರಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಗ್ರಾಮಸಭೆ ನಡೆಸಲು ಬಿಡುವುದಿಲ್ಲ ಮುಂದುಡಿಸಿ ಎಂದು ಒತ್ತಾಯಿಸಿದರು. ಅಧ್ಯಕ್ಷರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವಕಾಶ ಕೊಡದೆ ದಿಕ್ಕಾರ ಕೂಗಿ ವೇದಿಕೆಯ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದ ಘಟನೆಯು ನಡೆಯಿತು.



ಗ್ರಾಮ ಸಭೆಯನ್ನು ಮುನ್ನಡೆಸಬೇಕಾದರೆ ಪಂಚಾಯತ್ ಎದುರು ಹಾಕಿರುವ ಎಲ್ಲಾ ಬಿಡರಗಳನ್ನು ಮತ್ತು ಜಲ್ಲಿಕಲ್ಲುಗಳನ್ನು ತೆರವು ಮಾಡಿ ನಂತರ ಗ್ರಾಮಸಭೆ ನಡೆಸಿ ಎಂದು ಸಾರ್ವಜನಿಕರು ತಿಳಿಸಿದಾಗ ನೋಡಲ್ ಅಧಿಕಾರಿ ಮಾತನಾಡಿ ಪಂಚಾಯತ್ ಆಡಳಿತ ವರ್ಗ ಮಾತನಾಡಲು ಅವಕಾಶ ಮಾಡಿ ಕೊಡಿ ಎಂದು ಹೇಳಿದಾಗ ಪಂಚಾಯತ್ ಪಿ.ಡಿ.ಓ ಮಾತನಾಡಿ ಜಾಗವನ್ನು ನೋಡಿದ್ದೇವೆ ಮುಂದಿನ ಮೂರು ದಿನಗಳಲ್ಲಿ ಎಲ್ಲವನ್ನು ತೆಗೆದು ಅವರಿಗೆ ಬದಲಿ ವ್ಯವಸ್ಥೆ ಮಾಡುತ್ತೇವೆ ಎಂದರು.

ಚಾರ್ಮಾಡಿಯಲ್ಲಿ ಮಾಡಿದ ಕಿರು ಸೇತುವೆಯ ದಂಡೆಯನ್ನು ಕೆಡವಿದ್ದಾರೆ ಸಾರ್ವಜನಿಕರ ಸುತ್ತು ಹನಿ ಮಾಡಿದ್ದಾರೆ ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಆಸ್ಪತ್ರೆಗೆ ಹೋಗುವ ರಸ್ತೆಯ ಚರಂಡಿ ವ್ಯವಸ್ಥೆ ಮಾಡಿದ್ದೇವೆ ಎಂದು ಒಂದು ಲಕ್ಷ ಬಿಲ್ ಮಾಡಿದ್ದಾರೆ ಆದರೆ ಯಾವುದೇ ಕೆಲಸ ನಡೆದಿಲ್ಲ ಎಂದು ಸಾರ್ವಜನಿಕರು ತಿಳಿಸಿದಾಗ ಯಾವುದೇ ಕಾಮಗಾರಿಯ ಬಗ್ಗೆ ಪಂಚಾಯತ್ ನಲ್ಲಿ ಸಂಪೂರ್ಣ ಮಾಹಿತಿ ಇದೆ ನಿಯಮದ ಪ್ರಕಾರ ದಾಖಲೆಗಳನ್ನು ಕೇಳಿ ಅದನ್ನು ಕೊಡುತ್ತೇವೆ ಎಂದು ಪಂಚಾಯತ್ ಪಿ. ಡಿ. ಓ ತಿಳಿಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೀಲು, ದ್ವಿ.ದ ಲೆಕ್ಕ ಸಹಾಯಕ ಸಂಜೀವ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.









