






ಬೆಳ್ತಂಗಡಿ: ಅಲೇರಿ ಶ್ರೀ ಸತ್ಯ ಸಾರಾಮಾನಿ ಕಾನದ – ಕಟದ ಮೂಲ ಕ್ಷೇತ್ರ ಅಲೇರಿ, ಮಿಜಾರು ಮೂಡಬಿದ್ರೆ ತಾಲೂಕು , ಫೆ.8ರಂದು ನಡೆಯುವಂತಹ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯನ್ನು ಕುಕ್ಕೇಡಿ – ನಿಟ್ಟಡೆ, ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಸಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ ಚಂದ್ರಪ್ಪ ಮತ್ತು ತಾಲೂಕು ಸಮಿತಿ ಉಪಾಧ್ಯಕ್ಷ ಶೇಖರ್ ವಿ. ಧರ್ಮಸ್ಥಳ ಮತ್ತು ಕೇಂದ್ರ ಸಮಿತಿಯ ಕೋಶಾಧಿಕಾರಿ ಶೇಖರ್ ಕುಕ್ಕೇಡಿ ಭಾಗವಹಿಸಿದರು.


ಕ.ದ.ಸಂ.ಸ ಹೋಬಳಿ ಸಂಚಾಲಕ ಚರಣ್ ಕುಕ್ಕೇಡಿ ಅವರು ಸ್ವಾಗತ ಮಾಡಿದರು. ಮತ್ತು ಕುಕ್ಕೇಡಿ ಗ್ರಾಮ ಸಮಿತಿಯ ಪದಾಧಿಕಾರಿಗಳನ್ನು ವಿಸ್ತರಣೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಕೃಷ್ಣಪ್ಪ ನೆಲ್ಲಿಗುಡ್ಡೆ, ಅಧ್ಯಕ್ಷರಾಗಿ ಸಂಜೀವ ಪಿಲಿಯೂರು, ಉಪಾಧ್ಯಕ್ಷರಾಗಿ ನವೀನ್ ಕಾಂಜರಕಟ್ಟೆ, ಇನ್ನೋರ್ವ ಉಪಾಧ್ಯಕ್ಷರಾಗಿ ವಸಂತ ನಿಟ್ಟಡೆ, ಕಾರ್ಯದರ್ಶಿಯಾಗಿ ಆನಂದ ಅಮೈಪಲ್ಕೆ, ಜೊತೆ ಕಾರ್ಯದರ್ಶಿಯಾಗಿ ನಾಗಮ್ಮ ಕಾಂಜರಾಕಟ್ಟೆ, ಕೋಶಾಧಿಕಾರಿಯಾಗಿ ಪೂರ್ಣಿಮಾ ನಿಟ್ಟಡೆ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಉಮೇಶ್ ಪಿಲಿಯೂರು, ಹರೀಶ್ ಕಾಂಜರಕಟ್ಟೆ, ಶೀನ ಪಿಲಿಯೂರು, ಜಗದೀಶ್ ನಡ್ಯಲಿಕೆ, ರಮೇಶ್ ಕುಕ್ಕೇಡಿ, ಚಂದ್ರಾವತಿ ಹೊಸಗುಡ್ಡೆ, ಸದಾನಂದ ನಿಟ್ಟಡೆ, ಅಂಥೋನಿ ಪಂಡಿಜೆ, ಸಂಜೀವ ನೆಲ್ಲಿಗುಡ್ಡೆ, ಸುಜಯ್ ಪಂಡಿಜೆ, ವಿಶ್ವನಾಥ ಹೊಸಗುಡ್ಡೆ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯನ್ನು ಉದ್ಧೇಶಿಸಿ ಚಂದ್ರಪ್ಪ, ಶೇಖರ್ ವಿ. ಧರ್ಮಸ್ಥಳ, ಶೇಖರ್ ಕುಕ್ಕೇಡಿ ಅವರು ಮಾತನಾಡಿದರು, ಕುಕ್ಕೇಡಿ ಕ.ದ.ಸಂ.ಸ ಸಂಚಾಲಕ ಹರೀಶ್ ಪಂಡಿಜೆ ಅವರು ಧನ್ಯವಾದ ನೀಡಿದರು.









