ಮಾಚಾರು ಮಸೀದಿ ಊರುಸ್ ಪೋಸ್ಟರ್ ಬಿಡುಗಡೆ

0

ಉಜಿರೆ: ಗ್ರಾಮದ ಮಾಚಾರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಮುಹಮ್ಮದ್ ವಲಿಯುಲ್ಲಾಹಿ (ಖ.ಸಿ)ದರ್ಗಾ ಶರೀಫ್ ಉರೂಸ್ ಮುಬಾರಕ್ ಹಾಗೂ ಸಿರಾಜುಲ್ ಹುದಾ ಮದರಸದ ನೂತನ ಕಟ್ಟಡ ಉದ್ಘಾಟನೆ ಏ.8 ರಿಂದ 11ರ ತನಕ ನಡೆಯಲಿದ್ದು, ಇದರ ಪೋಸ್ಟರನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರಾದ ಬಿಡುಗಡೆಗೊಳಿಸಿ ಆಶಿರ್ವದಿಸಿದರು.
ಮಾಚಾರು ಜಮಾಅತ್ ಖತೀಬು ಉಸ್ತಾದರಾದ ಸಲೀಮ್ ಸಖಾಫಿ ಭಧ್ರಾವತಿ, ಅಧ್ಯಕ್ಷ ಬಿ. ಎಮ್. ಇಲ್ಯಾಸ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಹಸೈನಾರ್ ಟೈಲ್ಸ್, ಸದಸ್ಯರಾದ ಅಬ್ದುಲ್ ರಝ್ಝಾಕ್ ಚೆಕ್ಕೆದಡಿ, ಸುಲೈಮಾನ್ ಬೀಮಂಡೆ, ಸಂಶುದ್ದೀನ್ ಮಾಯ, ಇಕ್ಬಾಲ್ ಮರ್ಝೂಕಿ ಸಖಾಫಿ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಸ‌ಅದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here