






ಹತ್ಯಡ್ಕ: ಗ್ರಾಮದ ನೆಕ್ಕರಡ್ಕದಲ್ಲಿ ಜೀರ್ಣೋದ್ದಾರ ಕಾರ್ಯ ಪ್ರಗತಿಯಲ್ಲಿರುವ ವಿಠೋಬಾ ರುಕುಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ರೂಪಾಯಿಗಳ ದೇಣಿಗೆ ಚೆಕ್ ಅನ್ನು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶೋಧರ ದೇವಸ್ಥಾನದ ಆಡಳಿತ ಮಂಡಳಿಗೆ ಜ.21ರಂದು ಹಸ್ತಾಂತರಿಸಿದರು.


ದೇವಳದ ಆಡಳಿತ ಮಂಡಳಿಯ ಪ್ರಮುಖರಾದ ರಮೇಶ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅನಂತ ಗೋಖಲೆ, ಕಾರ್ಯದರ್ಶಿ ಜಿತೇಂದ್ರ ಗೋಖಲೆ, ಸದಸ್ಯರಾದ ಕಾರ್ತಿಕ್ ಹೆಬ್ಬಾರ್, ನರಸಿಂಹ ಪಾಳಂದೆ, ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು.
ಗ್ರಾಮಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿಗಳಾದ ಯಮುನಾ ಎಂ. ಮತ್ತು ರೂಪಾ, ಜನಜಾಗೃತಿಯ ವಲಯ ಅಧ್ಯಕ್ಷ ಸತೀಶ್ ಶೆಟ್ಟಿ ಗುತ್ತು, ಹತ್ಯಡ್ಕ A ಒಕ್ಕೂಟದ ಉಪಾಧ್ಯಕ್ಷೆ ಸರೋಜಿನಿ ನಾಯ್ಕ, ಹತ್ಯಡ್ಕ B ಒಕ್ಕೂಟದ ಅಧ್ಯಕ್ಷೆ ಸುನಂದ ಟಿ. ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಅರಸಿನಮಕ್ಕಿ ಶಿಶಿಲ ಘಟಕದ ಘಟಕ ಪ್ರತಿನಿಧಿ ಅವಿನಾಶ್ ಭಿಡೆ ಉಪಸ್ಥಿತಿಯಲ್ಲಿ ಚೆಕ್ ಅನ್ನು ಹಸ್ತಾಂತರಿಸಲಾಯಿತು.









