ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್‌ ಕಾರ್ಯಕ್ರಮ

0

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್‌ ಕಾರ್ಯಕ್ರಮವನ್ನು ಜ. 9ರಂದು ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್‌ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಶ್ರವಣಶಾಸ್ತ್ರಜ್ಞ ಮತ್ತು ಐಡಿಯಲ್‌ ಸ್ಪೀಚ್‌ ಮತ್ತು ಹಿಯರಿಂಗ್‌ ಸೊಲ್ಯೂಷನ್ಸ್‌ ನ ಸಂಸ್ಥಾಪಕ ರಿತೇಶ್‌ ಗೋನ್ಸಾಲ್ವಿಸ್‌ ನಡೆಸಿಕೊಟ್ಟರು.

ಶ್ರವಣ ದೋಷವುಳ್ಳ ಮಕ್ಕಳ ಶ್ರವಣ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಅಗತ್ಯವಾದ ಶ್ರವಣ ಸಾಧನ ಪ್ರೋಗ್ರಾಮಿಂಗ್‌ ಹಾಗೂ ಫಿಟ್ಟಿಂಗ್‌ ಗಳನ್ನು ಒದಗಿಸುವುದು ಹಾಗೂ ಶ್ರವಣದೋಷವಿರುವ ಮಕ್ಕಳನ್ನು ಮುಂಚಿತವಾಗಿ ಗುರುತಿಸಿ ಸೂಕ್ತ ಹಸ್ತಕ್ಷೇಪದ ಮೂಲಕ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು 5 ಮಕ್ಕಳಿಗೆ ಶ್ರವಣ ಮೌಲ್ಯಮಾಪನವನ್ನು ನಡೆಸಿ, ಶ್ರವಣ ದೋಷವಿರುವ 3 ವಿಶೇಷ ಚೇತನ ಮಕ್ಕಳಿಗೆ ದಾನಿಯೊಬ್ಬರಿಂದ ನೀಡಲ್ಪಟ್ಟ ಶ್ರವಣ ಸಾಧನಗಳನ್ನು ಅಳವಡಿಸಲಾಯಿತು.

ಶಾಲಾ ಶ್ರವಣಶಾಸ್ತ್ರಜ್ಞ ಮತ್ತು ಸ್ಪೀಚ್‌ ಥೆರಪಿಸ್ಟ್‌ ರಕ್ಷಾ ಅರುಣ್‌ ಪೂಜಾರಿ ಹಾಗೂ ಮಂಗಳೂರು ಕಾಲೇಜು ಎಮ್.ವಿ.ಶೆಟ್ಟಿ ಇಲ್ಲಿನ ಇಂಟರ್ನ್ಸ್‌ಗಳಾದ ಕಾವೇರಿ ಮತ್ತು ಶಿರ್ಲಿ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here