ಧರ್ಮಸ್ಥಳ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ವತಿಯಿಂದ ರಸ್ತೆ ಸಪ್ತಾಹ ಜಾಗೃತಿ ಕಾರ್ಯಕ್ರಮ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ವಿದ್ಯಾರ್ಥಿಗಳಿಂದ ರಸ್ತೆ ಸಪ್ತಾಹದ ಅಂಗವಾಗಿ, ವೇಗ ನಿಯಂತ್ರಣ, ಅಪಘಾತ ತಡೆಗಟ್ಟುವಿಕೆ, ರಸ್ತೆ ಸುರಕ್ಷತೆಯ ಮಾಹಿತಿ ಕಾರ್ಯಗಾರವು ನಡೆಯಿತು.

ವಾಹನ ಚಲಾಯಿಸಲು ವಯಸ್ಸಿನ ಮಿತಿ, ಹಾಗೂ ಯಾವೆಲ್ಲ ದಾಖಲೆಗಳನ್ನು ವಾಹನ ಸವಾರರು ಹೊಂದಿರಬೇಕು. ಎಂಬುದರ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯ ಎ.ಎಸ್.ಐ ಬಾಲಕೃಷ್ಣ ಮಾಹಿತಿ ನೀಡಿದರು. ಅಲ್ಲದೆ ಧರ್ಮಸ್ಥಳ ಪೇಟೆಯಲ್ಲಿ ಜಾಥದ ಮ‌ೂಲಕ ಘೋಷಣೆಗಳೊಂದಿಗೆ ಸಂಚರಿಸುತ್ತ ನಾಗರಿಕರಿಗೆ ಜಾಗೃತಿ ಮೂಡಿಸಿದರು. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಹಾಗೂ ಸಾಮಾನ್ಯ ಜನರ ನಡುವಿನ ಸಂಬಂಧ ಹೇಗಿರಬೇಕು ಯಾವ ಯಾವ ಸಂದರ್ಭಗಳಲ್ಲಿ ಪೊಲೀಸರನ್ನು ಸಂಪರ್ಕಿಸಬಹುದು ಬಂದಿಖಾನೆ ಹೇಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ. ವಿ. ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ಉಷಾ, ಜಗದೀಶ್, ಶಿವಕುಮಾರ್, ಶಿಕ್ಷಕಿ ರಮಾ ರಾಜೇಶ್ ಸ್ವಾಗತಿಸಿ, ಭಾರತ್ ಸ್ಕೌಟ್ ಮತ್ತು ಗೈಡ್ ವಿಧ್ಯಾರ್ಥಿನಿ ಆರಾಧ್ಯ ಪಿ.ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಸ್ಕೌಟ್ಸ್ ಮಾಸ್ಟರ್ ಗಳಾದ ಜ್ಯೋತಿ ಲಕ್ಷ್ಮಿ, ಶಶಿಕಲಾ. ಗೈಡ್ ಕ್ಯಾಪ್ಟನ್ ಗಳಾದ ಗೀತಾ, ಶಿಭಾ, ದೀಕ್ಷಾ ಸಹಕಾರ ನೀಡಿದರು. ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ಕೌಟ್ ಮಾಸ್ಟರ್ ಆಶಾ ಕುಮಾರಿ ವಂದಿಸಿದರು.

LEAVE A REPLY

Please enter your comment!
Please enter your name here