ಎನ್‌.ಎಸ್‌.ಎಸ್ ರಾಜ್ಯಮಟ್ಟದ ಗಣರಾಜ್ಯೋತ್ಸವ ಶಿಬಿರಕ್ಕೆ ಟಿ. ಸುದರ್ಶನ್ ನಾಯಕ್ ಆಯ್ಕೆ

0

ಬೆಳ್ತಂಗಡಿ: ಜ.26ರಂದು ಬೆಂಗಳೂರಿನ ಮಾಣಿಕ್ ಷಾ ಕ್ರೀಡಾಂಗಣದಲ್ಲಿ ನಡೆಯುವ ಕರ್ನಾಟಕ ರಾಜ್ಯ ಗಣರಾಜ್ಯೋತ್ಸವ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂಸೇವಕರ ತಂಡಕ್ಕೆ ಗುರುವಾಯನಕೆರೆಯ ಟಿ. ಸುದರ್ಶನ್ ನಾಯಕ್ ಅವರು ಆಯ್ಕೆಯಾಗಿದ್ದು, ಪ್ರಸ್ತುತ ಯುವ ತರಬೇತಿ ಕೇಂದ್ರ, ಕುಂಬಳಗೂಡು, ಬೆಂಗಳೂರಿನಲ್ಲಿ ಜ.11ರಿಂದ 26ರವರೆಗೆ ನಡೆಯುವ ಎನ್‌.ಎಸ್‌.ಎಸ್ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅವರು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (ಸ್ವಾಯತ್ತ) ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಕಾಲೇಜಿನ ಎನ್‌.ಎಸ್‌.ಎಸ್ ಘಟಕದ ನಾಯಕರಾಗಿದ್ದಾರೆ. ಅವರು ಎನ್‌.ಎಸ್‌.ಎಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈಗಾಗಲೇ ಕಾರವಾರದಲ್ಲಿ ನಡೆದ ರಾಷ್ಟ್ರೀಯ ಏಕತಾ ಶಿಬಿರ, ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲೂ ಪಾಲ್ಗೊಂಡಿದ್ದಾರೆ. ಅಲ್ಲದೆ, ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪೂರ್ವ ತರಬೇತಿ ಶಿಬಿರ ಹಾಗೂ ಕೇರಳದಲ್ಲಿ ನಡೆದ ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ತರಬೇತಿ ಶಿಬಿರದಲ್ಲೂ ಭಾಗವಹಿಸಿ ಉತ್ತಮ ಅನುಭವ ಪಡೆದಿದ್ದಾರೆ.

ಅವರ ಈ ಮಹತ್ವದ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌.ಎಸ್‌.ಎಸ್ ಘಟಕಗಳ ಯೋಜನಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here