






ಕೊಕ್ಕಡ: ಹಿಂದೂ ಸಂಗಮ ಆಯೋಜನ ಸಮಿತಿ ಉಜಿರೆ, ಕೊಕ್ಕಡ ಮಂಡಲ, ಕೊಕ್ಕಡ ಮತ್ತು ಪಟ್ರಮೆ ಗ್ರಾಮ ಜ.25ರಂದು ಸಂಜೆ 3ಗಂಟೆಗೆ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಸಂಕ್ರಾಂತಿ ಮೈದಾನದಲ್ಲಿ ಜರಗುವ ಹಿಂದೂ ಸಂಗಮ 2026 ಬೃಹತ್ ಶೋಭಾಯಾತ್ರೆ ಇದರ ಆಮಂತ್ರಣ ಪತ್ರಿಕೆಯನ್ನು ಜ.16ರಂದು ಶ್ರೀ ರಾಮ ಸೇವಾ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.


ಉಜಿರೆ ಹಿಂದೂ ಸಂಗಮ ಆಯೋಜನಾ ಸಮಿತಿಯ ಉಪಾಧ್ಯಕ್ಷೆ ಡಾ. ತಾರಾ ಗಣೇಶ್, ತಾಲೂಕು ಸಮಿತಿ ಸಹ ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ತಾಲೂಕು ಸಮಿತಿ ಸದಸ್ಯರಾದ ಪ್ರಶಾಂತ್ ಶೆಟ್ಟಿ ಪಟ್ಟೂರು, ಹಿಂದೂ ಸಂಗಮ ಕೊಕ್ಕಡ ಮಂಡಲದ ಸಂಯೋಜಕ ರುಕ್ಮಯ್ಯ ಮಡಿವಾಳ, ಹಿರಿಯರಾದ ಕುಶಾಲಪ್ಪ ಗೌಡ ಪೂವಾಜೆ, ತಿಲಕ್ ಅನಾರು ಹಾಗೂ ಕೊಕ್ಕಡ ಮಂಡಲ ಹಿಂದೂ ಸಂಗಮದ ವಿವಿಧ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.









