






ಲಾಯಿಲ : ದಯಾ ವಿಶೇಷ ಶಾಲೆಯಲ್ಲಿ ದಿ| ಕೆ. ವಸಂತ ಬಂಗೇರರವರ 80 ನೇ ವರ್ಷದ ಹುಟ್ಟುಹಬ್ಬವನ್ನು ಜ.16ರಂದು ಆಚರಿಸಲಾಯಿತು.
ದಿ| ಕೆ. ವಸಂತ ಬಂಗೇರರವರ ಸಂಸ್ಥೆಯೊಂದಿಗಿನ ಒಡನಾಟ ಮತ್ತು ಶಾಲೆಯ ವಿಭಿನ್ನ ಸಾಮರ್ಥ್ಯದ ಮಕ್ಕಳ ಬಗೆಗಿನ ಅವಾರ ಕಾಳಜಿಯಿಂದಾಗಿ ಪ್ರತೀ ವರ್ಷವೂ ವಿಭಿನ್ನ ಕಾರ್ಯಕ್ರಮಗಳನ್ನು ಶಾಲೆಯ ಮಕ್ಕಳಿಗಾಗಿ ಅವರ ಹುಟ್ಟು ಹಬ್ಬ ಹಾಗೂ ಪುಣ್ಯಸ್ಮರಣೆಯ ಅಂಗವಾಗಿ ಅವರ ಕುಟುಂಬಸ್ಥರು ಆಚರಿಸುತ್ತಾ ಬಂದಿರುತ್ತಾರೆ. ಈ ಬಾರಿಯೂ ಅವರ 80 ನೇ ವರ್ಷದ ಹುಟ್ಟುಹಬ್ಬದ ಪರವಾಗಿ ಶಾಲೆಯ ವಿಭಿನ್ನ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.


ಶಾಲೆಯ ನಿರ್ದೇಶಕರು, ವಿಶೇಷ ಚೇತನ ಮಕ್ಕಳು ಹಾಗೂ ಸಿಬ್ಬಂದಿಗಳು ವಸಂತ ಬಂಗೇರ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಬೇಡುತ್ತಾ, ಅವರ ಕುಟುಂಬಸ್ಥರ ಈ ಉದಾತ್ತ ಹೃದಯಕ್ಕೆ ಹಾಗೂ ಶಾಲೆಯ ವಿಶೇಷ ಚೇತನ ಮಕ್ಕಳ ಪರ ಅವರು ತೋರುತ್ತಿರುವ ಅಕ್ಕರೆ, ವಾತ್ಸಲ್ಯಕ್ಕೆ ವಂದಿಸಿದರು.
ಶಾಲೆಯ 107 ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶೇಷ ಭೋಜನವನ್ನು ಸವಿದು, ದಿ. ಕೆ.ವಸಂತ ಬಂಗೇರ ರವರ ಆತ್ಮದ ಚಿರಶಾಂತಿಗಾಗಿ ಹಾಗೂ ಅವರ ಕುಟುಂಬಸ್ಥರ ಉತ್ತಮ ಆಯುರಾರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.









