ಶಿವಾಜಿನಗರದ ಎಸ್‌.ಸಿ. ಕಾಲೋನಿಯ ವಡಿವೇಲ್ ಅವರ ಮನೆಯಲ್ಲಿ ಸಾಮರಸ್ಯದ ಸಂಕ್ರಾಂತಿ ಕಾರ್ಯಕ್ರಮ- ಶಾಸಕ ಹರೀಶ್‌ ಪೂಂಜ ಭಾಗಿ

0

ಗುರುವಾಯನಕೆರೆ: ಕುವೆಟ್ಟು ಶಕ್ತಿಕೇಂದ್ರ ವ್ಯಾಪ್ತಿಯ ಸಾಮರಸ್ಯದ ಸಂಕ್ರಾಂತಿ ಕಾರ್ಯಕ್ರಮವು ಜ.15ರಂದು ಸಂಜೆ ಶಿವಾಜಿನಗರದ ಎಸ.ಸಿ. ಕಾಲೋನಿಯ ವಡಿವೇಲ್ ಅವರ ಮನೆಯಲ್ಲಿ ಶಾಸಕ ಹರೀಶ್ ಪೂಂಜರ ಉಪಸ್ಥಿತಿಯಲ್ಲಿ ನಡೆಯಿತು.

ಸುಮಾರು 125 ಬಂಧುಗಳಿಗೆ ಕಿಟ್ ವಿತರಣೆ ಮಾಡಿ, ಶಾಸಕ ಹರೀಶ್‌ ಪೂಂಜರು ಬಂದ ಎಲ್ಲಾ ಬಂಧುಗಳೊಂದಿಗೆ ಕೂತು ಸಹ ಭೋಜನ ಮಾಡಿದರು. ಎಸ್ಸಿ ಮೋರ್ಚಾದ ಅಧ್ಯಕ್ಷರಾದ ಈಶ್ವರ ಭೈರ, ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿಯಾದ ವಸಂತಿ ಮಚ್ಚಿನ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ. ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿ ಉಮೇಶ್ ಕುಲಾಲ್, ತಾಲೂಕು ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಠಲಆಚಾರ್ಯ, ಕುವೆಟ್ಟು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here