






ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗೆ ಮಧುಮಗಳ ಶೃಂಗಾರ 6 ದಿನದ ತರಬೇತಿ ಕಾರ್ಯಕ್ರಮವನ್ನು ಗುರುವಾಯನಕೆರೆ ಯೋಜನಾ ಕಚೇರಿಯ ಗುರುವಾಯನಕೆರೆ ಪಂಚಾಯಿತಿ ಹಾಲ್ ನಲ್ಲಿ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತೀ ಎಸ್. ಶೆಟ್ಟಿ ಉದ್ಘಾಟನೆ ಮಾಡಿದರು. ಪ್ರಾಸ್ತಾವಿಕ ಮಾತನ್ನು ತಾಲೂಕಿನ ಯೋಜನಾಧಿಕಾರಿ ಅಶೋಕ್ ಬಿ. ಮಾಡಿದರು. ಅಧ್ಯಕ್ಷತೆ ಪ್ರಭಾವತಿ ಉಪಾಧ್ಯಾಯ ವಹಿಸಿಕೊಂಡರು.


ಕೇಂದ್ರ ಕಛೇರಿ ಮಹಿಳಾ ಜ್ಞಾನ ವಿಕಾಸ ಯೋಜನಾಧಿಕಾರಿ ಮಲ್ಲಿಕಾ ಅವರು ಈ ತರಬೇತಿಯು ಪ್ರಸ್ತುತ ಸಮಯದಲ್ಲಿ ಮಹಿಳೆಯರಿಗೆ ಬಹಳ ಉಪಯುಕ್ತವಾಗಿದೆ. ಇದರಿಂದ ಮಹಿಳೆಗೆ ಸ್ವ ಉದ್ಯೋಗ ದೊರಕುತ್ತದೆ. ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಥಿಕ ಸಹಕಾರ ಕೇಂದ್ರದ ಸಮಾಲೋಚಕಿ ಉಷಾ ನಾಯಕ್, ತರಬೇತಿದಾರರಾದ ನೇತ್ರ ಉಪಸ್ಥಿತರಿದ್ದರು. ಸುಮಾರು 47 ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಿದರು. ವಲಯ ಮೇಲ್ವಿಚಾರಕಿ ಯಶೋಧ ಸ್ವಾಗತ ಮಾಡಿದರು. ಜ್ಞಾನ ವಿಕಾಸ ತಾಲೂಕು ಸಮನ್ವಯ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ಭಾರತೀ ಧನ್ಯವಾದವಿತ್ತರು.









