






ಮಚ್ಚಿನ: ಆಟೋ ಚಾಲಕ ಮಾಲಕರ ಸಂಘ ಮಡಂತ್ಯಾರು ವಲಯದ 23ನೇ ವಾರ್ಷಿಕ ಮಹಾಸಭೆ ಜ.15ರಂದು ಮಡಂತ್ಯಾರು ಎಸ್.ಡಿ.ಎಸ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕ ಮಾಲಕರ ಸಂಘದ ಗೌರಧ್ಯಕ್ಷ ನ್ಯಾಯವಾದಿ ಬದ್ರಿನಾಥ್ ಸಂಪಿಗೆತ್ತಾಯ ಅವರು ಮಾತನಾಡಿ ಮಡಂತ್ಯಾರು ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಕೆಲಸಗಳು ನಡೆಯುತ್ತಿದ್ದು ಆಟೋ ಚಾಲಕರಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಎರಡು ಗ್ರಾಮ ಪಂಚಾಯಿತಿಗಳು ಒಟ್ಟು ಸೇರಿ ಮಾಡಿಕೊಡುವಂತೆ ಕೋರಿದರು.
ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ರೂಪ ನವೀನ್, ಮಾಲಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಆಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷರು, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯ ಪ್ರಮೋದ್ ಕುಮಾರ್ ಬಳ್ಳಮಂಜ, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ಉಪಸ್ಥಿತರಿದ್ದರು.



ಆಟೋ ಚಾಲಕರ ವಿವಿಧ ಬೇಡಿಕೆಯ ಮನವಿಯನ್ನು ಮಡಂತ್ಯಾರು ಹಾಗೂ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಸಂಘದ ಗೌರವಾಧ್ಯಕ್ಷ ಬದ್ರಿನಾಥ ಸಂಪಿಗೆತ್ತಾಯ ಹಾಗೂ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ನೀಡಿದರು.
ಆಟೋ ಚಾಲಕ ಮಾಲಕರ ಸಂಘದ ನೂತನ ಅಧ್ಯಕ್ಷೆ ರಾಜೇಶ್ವರಿ ಕೊಕ್ಕಳ, ಕಾರ್ಯದರ್ಶಿಯಾಗಿ ರಮೇಶ್ ಕೊಡೈಲು ಬಳ್ಳಮಂಜ ಅವರಿಗೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಕಾರ್ಯದರ್ಶಿ ವಸಂತ ಬಳ್ಳಮಂಜ ಅವರು ಅಧಿಕಾರ ಹಸ್ತಾಂತರಿಸಿದರು. ಕರುಣಾಕರ ಸ್ವಾಗತಿಸಿದರು. ವಸಂತ ಬಳ್ಳಮಂಜ ವಾರ್ಷಿಕ ವರದಿ ಮಂಡಿಸಿದರು. ರಮೇಶ್ ಕುದ್ರಡ್ಕ ಕಾರ್ಯಕ್ರಮ ನಿರೂಪಿಸಿದರು.
✍️ಹರ್ಷ ಬಳ್ಳಮಂಜ









