ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರಿಗೆ ಹುಟ್ಟೂರ ಗೌರವ

0

ಕಾನರ್ಪ: ಶ್ರೀ ರಾಮಾಂಜನೇಯ ದೇವಸ್ಥಾನ, ಆಂಜನೇಯ ಬೆಟ್ಟ, ಕಾನರ್ಪ, ಕಡಿರುದ್ಯಾವರ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕ, ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ಅವರಿಗೆ ಹುಟ್ಟೂರ ಗೌರವ ಸಮರ್ಪಿಸಲಾಯಿತು.

ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿ, ನೀಟ್ , ಜೆಇಇ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ ಸುಮಂತ್ ಕುಮಾರ್ ಜೈನ್ ಅವರು, ಗುರುವಾಯನಕೆರೆ ಹಾಗೂ ವೇಣೂರಿನಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪೂರ್ವ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ.

ಸುಮಂತ್ ಕುಮಾರ್ ಜೈನ್ ಅವರು ಬಂಗಾಡಿ ಬಳಿಯ ಬೊಳ್ಳೂರು ಗುತ್ತು ಮನೆತನಕ್ಕೆ ಸೇರಿದವರು. ಬಡ ಕುಟುಂಬದಿಂದ ಬಂದ ಸುಮಂತ್ ಅವರು ಇಂದು ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ.

ಅದೆಷ್ಟೋ ವಿದ್ಯಾರ್ಥಿಗಳನ್ನು ಏಮ್ಸ್, ಜಿಪ್ಮಾರ್, ಹಾಗೂ ಅತ್ಯುನ್ನತ ಮಟ್ಟದ ವೈದ್ಯಕೀಯ ಕಾಲೇಜು ಗಳಿಗೆ ಹಾಗೂ ಐಐಟಿ, ಎನ್ಐಐಟಿ, ಐಐಐಟಿ ಹಾಗೂ ಉನ್ನತ ತಾಂತ್ರಿಕ ವಿದ್ಯಾಲಯಗಳಿಗೆ, ಉನ್ನತ ವಿಜ್ಞಾನ ಅಧ್ಯಯನ ಸಂಸ್ಥೆಗಳಲ್ಲಿ ವ್ಯಾಸಂಗ ನಡೆಸಲು ತರಬೇತಿ ಕೊಡಿಸಿದ್ದಾರೆ.

ಸುಮಂತ್ ಕುಮಾರ್ ಜೈನ್ ಅವರ ಈ ಸೇವೆಯನ್ನು ಪರಿಗಣಿಸಿ ಅನೇಕ ಗೌರವ – ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅವರ ಹುಟ್ಟೂರಿನ ಅಭಿಮಾನಿಗಳು ಕಾನರ್ಪದ ಶ್ರೀ ರಾಮಾಂಜನೇಯ ದೇವಸ್ಥಾನ, ಆಂಜನೇಯ ಬೆಟ್ಟದ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮದಲ್ಲಿ ಸುಮಂತ್ ಕುಮಾರ್ ಜೈನ್ ಅವರನ್ನು ಅವರ ಮಾತಾ ಪಿತರಾದ ಶುಭಲಕ್ಷ್ಮಿ ಹಾಗೂ ಸತೀಶ್ ಕುಮಾರ್ ಆರಿಗ ಅವರ ಜೊತೆಗೆ ಸ್ಮರಣಿಕೆ ಜತೆಗೆ ಸನ್ಮಾನ ಪತ್ರ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಹಿರಿಯರಾದ ಶ್ರೀಧರ ಭಿಡೆ, ವಿಶ್ರಾಂತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ, ಬಾಬು ಪೂಜಾರಿ ಕೂಳೂರು, ಫಿಲೋಮಿನಾ ಸಿ ಜೆ, ವಿಶ್ವನಾಥ ಶೆಟ್ಟಿ ಮುಂಡಾಜೆ, ಬಿ ಕೆ ಗೋವಿಂದ ದುಂಬೆಟ್ಟು, ರಾಜೇಶ್ ಗೌಡ ಹೇಡ್ಯ, ಕಿಶೋರ್ ಕುಮಾರ್, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here