






ಬೆಳ್ತಂಗಡಿ: ಪಟ್ಟಣ ಪಂಚಾಯತ್ ಗೆ ಸೇರಿದ ಸಕ್ಕಿಂಗ್ ಯಂತ್ರ ವಾಹನದ ಚಾಲಕ ತುಹಿನ್, ಜಗನ್ನಾಥ್, ಮತ್ತು ಲಕ್ಷ್ಮಿಶ ಇವರಿಗೆ ಅಪರಿಚಿತರಿಬ್ಬರು ಅವಾಚ್ಯ ಶಬ್ಧಗಳಿಂದ ನಿಂಧಿಸಿ, ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಘಟನೆ ಜ.14ರಂದು ಉಜಿರೆ ಕಾಶಿಬೆಟ್ಟು ಬಳಿ ನಡೆದಿದೆ.


ಮಧ್ಯಾಹ್ನ ಸುಮಾರು 2:40 ವೇಳೆಗೆ ಉಜಿರೆ ಗ್ರಾಮದ ಅರಳಿ ಅಂಗನವಾಡಿ ಕೇದ್ರದ ಬಳಿ ಸಕ್ಕಿಂಗ್ ವಾಹನ ತೆರಳುತ್ತಿದ್ದಂತೆ ಕೆಎ70ಜಿ7208 ನೇ ನಂಬರಿನ ಹೊಂಡಾ ಕಂಪೆನಿಯ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ವಿರುದ್ಧ ದಿಕ್ಕಿನಲ್ಲಿ ಬೈಕ್ ನ್ನು ಚಲಾಯಿಸಿದಲ್ಲದೆ ಅಡ್ಡಗಟ್ಟಿ ವಾಹನದಲ್ಲಿದ್ದ ಜಗನ್ನಾಥ ಮತ್ತು ಲಕ್ಷ್ಮೀಶ ರವರಿಗೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.









