








ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಮಾಹಿತಿ ಕಾರ್ಯಗಾರ ಜ. 13ರಂದು ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಸುಭಾಷಿಣಿ ಅನಂತ್, ಬೆಳ್ತಂಗಡಿ ವಕೀಲರು ಶೈಲೇಶ್ ಆರ್. ಥೋಸರ್ ಮತ್ತು ಮುಮ್ತಾಜ್ ಬೇಗಂ ಅವರು ಆಗಮಿಸಿ ಮಕ್ಕಳ ಹಕ್ಕುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಎಂ. ಆರ್. ಉಪಸ್ಥಿತರಿದ್ದರು. ಪ್ರಶ್ಯ ಸ್ವಾಗತಿಸಿ, ದಿಶಾ ಕಾರ್ಯಕ್ರಮವನ್ನು ನಿರೂಪಿಸಿದರು.









