






ಮಡಂತ್ಯಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯದಿಂದ ಬಸವನಗುಡಿ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರವು ನಡೆಯುತ್ತಿದ್ದು, ಸಮಿತಿಯಿಂದ ಮಾತೃವಂದನ, ಮಾತೃಧ್ಯಾನ ಮತ್ತು ಮಾತೃ ಭೋಜನ ಕಾರ್ಯಕ್ರಮವು ಜ.11ರಂದು ಜರಗಿತು.


ಕಾರ್ಯಕ್ರಮದಲ್ಲಿ ಮುಖ್ಯ ಮಾತುಗಾರರಾಗಿ ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಲಕ್ಷ್ಮೀನಾರಾಯಣ, ಮುಖ್ಯ ಅತಿಥಿಯಾಗಿ ಪಾರೆಂಕಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ಸುಶೀಲ ಮತ್ತು ಬೆಳ್ತಂಗಡಿ ಶಾಖೆಯ ಶಿಕ್ಷಕಿ ಪುಷ್ಪ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗಣೇಶ್, ಸುಕೇಶ್, ಸತೀಶ್ ಉಪಸ್ಥಿತರಿದ್ದರು. ಸ್ಥಳೀಯ ಶಾಖೆಗಳಾದ ಪುಂಜಾಲಕಟ್ಟೆ, ಬೆಳ್ತಂಗಡಿ, ಗುರುವಾಯನಕೆರೆ ಮತ್ತು ಕಳಿಯ ಶಾಖೆಯ ಯೋಗ ಬಂಧುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಮತಾ ಸ್ವಾಗತಿಸಿ, ಅಮಿತಾ ನಿರೂಪಿಸಿದರು. ಭವಾನಿ ವರದಿ ವಾಚಿಸಿ, ಯೋಗ ಬಂಧುಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡು, ಭಾರತಿ ವಂದನೆಗಳನ್ನು ಸಲ್ಲಿಸಿದರು.









